ಬೆಳ್ತಂಗಡಿ: ಶ್ರೀ ಸುಲ್ಕೆರಿಮೊಗ್ರು ಶ್ರೀ ಮಹಿಷಮರ್ದಿನಿ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾ ಪೂಜೆಯು ಆ. 8ರಂದು ಜರಗಲಿದೆ.
ವಿ.ಸೂ: 1. ಬೆಳಿಗ್ಗೆ ಗಂಟೆ 9-00ಕ್ಕೆ ಸರಿಯಾಗಿ ವರಮಹಾಲಕ್ಷ್ಮಿ ಪೂಜೆ ಪ್ರಾರಂಭ, 2. ಪೂಜೆ ಮಾಡಿಸುವವರು ಹೂವು, ತುಳಸಿ, ಬೆಳ್ಳಿಗೆ ಅಕ್ಕಿ 1 ಸೇರು, ತೆಂಗಿನಕಾಯಿ 2. ವೀಳ್ಯದೆಲೆ, ಅಡಿಕೆ, ಬಾಳೆ ಎಲೆ 5 ತುದಿ, ಲೋಟ 1. ಚಮಚ 1, ತರತಕ್ಕದ್ದು. ಹಾಗೂ ಪೂಜೆ ಒಂದರ ರೂ. 200-00 ರಶೀದಿ ಮಾಡಿಸತಕ್ಕದ್ದು. 3. ಪೂಜಾ ಸಾಮಾಗ್ರಿ ತರದವರು ರೂ. 250-00 ರಶೀದಿ ಮಾಡಿಸತಕ್ಕದ್ದು. 4. ಮಧ್ಯಾಹ್ನ ಗಂಟೆ 11-30ಕ್ಕೆ ಸರಿಯಾಗಿ ಮಹಾಪೂಜೆ 5. ಮಧ್ಯಾಹ್ನ ಗಂಟೆ 12-00ಕ್ಕೆ ಮಹಿಷಮರ್ದಿನಿ ದೇವರ ಮಹಾಪೂಜೆ, ಪ್ರಸಾದ ವಿತರಣೆ. ಸಾರ್ವಜನಿಕ ಅನ್ನಸಂತರ್ಪಣೆ. 6. ತಾ. 7-8-2025ನೇ ಗುರುವಾರ ಬೆಳಿಗ್ಗೆ ಗಂಟೆ 9-00ರಿಂದ ಸ್ವಚ್ಛತಾ ದೃಷ್ಟಿಯಿಂದ, ತಳಿರು/ ತೋರಣ ಕಟ್ಟಲು ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಬೇಕಾಗಿ ವಿನಂತಿ.