ಮೂಡುಬಿದಿರೆ ಅಖಂಡ ಏಕಾಹ ಭಜನಾ ಅಮೃತ ಮಹೋತ್ಸವದಲ್ಲಿ ಸುಂದರಕಾಂಡ ಹವನ

0
106


ವರದಿ ರಾಯಿ ರಾಜ ಕುಮಾರ
ಮೂಡುವೇಣುಪುರ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನ ಹಾಗೂ ವೆಂಕಟರಮಣ ಭಜನಾ ಮಂಡಳಿಯ ಸಂಯುಕ್ತಾಕ್ಷರದಲ್ಲಿ ನವೆಂಬರ್ 26ರಿಂದ ಡಿಸೆಂಬರ್ 2ರ ತನಕ ನಡೆಯುತ್ತಿರುವ ಅಖಂಡ ಏಕಾಹ ಭಜನಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ನವೆಂಬರ್ 27 ರಂದು ಆಡಳಿತ ಮುಕ್ತೇಸರ ಜಿ.ಉಮೇಶ್ ಪೈ ದಂಪತಿಗಳ ನೇತೃತ್ವದಲ್ಲಿ 12 ಮಂದಿ ಪವನ್ ಭಟ್ ರ ಋತ್ವಿಜರುಗಳಿಂದ ಪ್ರಾರಂಭಗೊಂಡ ಹನುಮಪ್ರಿಯ ಸುಂದರಕಾಂಡ ಹವನ ಮೂರು ದಿನಗಳ ಪರ್ಯಂತ ನಡೆಯುತ್ತಿದೆ. ದೇವಾಲಯದ ಉಳಿದ ಮುಕ್ತೇಸರರು, ಟ್ರಸ್ಟ್ ನ ಸದಸ್ಯರುಗಳು, ಭಜನಾ ಮಂಡಳಿಯ ಅಧ್ಯಕ್ಷ ತುಕಾರಾಮ ಮಲ್ಯ, ಸದಸ್ಯರುಗಳು ಸಹಕರಿಸುತ್ತಿದ್ದರು.
ಈ ಸಂದರ್ಭದಲ್ಲಿ ವಿದ್ವಾನ್ ಅನಂತ ಕೃಷ್ಣ ಆಚಾರ್ಯರಿಂದ ಸುಂದರಕಾಂಡ ಪ್ರವಚನ ಪ್ರತಿದಿನ ನಡೆಯುತ್ತದೆ.

LEAVE A REPLY

Please enter your comment!
Please enter your name here