ಹೆಂಡತಿಗೆ ಮೂವರು ಬಾಯ್‌ಫ್ರೆಂಡ್ ಇದ್ದರೂ ಕ್ಷಮಿಸಿದ್ದ ಗಂಡನ ಕೊಲೆಗೆ ಸುಪಾರಿ ಕೊಟ್ಟ ಸುಪನಾತಿ!

0
129

ಉತ್ತರ ಪ್ರದೇಶ: ಮದುವೆಯಾಗುವ ಮುಂಚೆಯೇ ತನ್ನ ಹೆಂಡತಿಗೆ ಮೂರು ಮೂರು ಜನರು ಬಾಯ್‌ಫ್ರೆಂಡ್ ಇದ್ದರು ಎಂಬ ವಿಚಾರ ತಿಳಿದರೂ ಎಲ್ಲವನ್ನು ಕ್ಷಮಿಸಿ ಸಂಸಾರವನ್ನು ಮಾಡಿಕೊಂಡು ಹೋಗುತ್ತಿದ್ದ ಗಂಡನನ್ನು ಹೆಂಡತಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಕೊಂಡ ಹೆಂಡತಿಯರು ಅನೈತಿಕ ಸಂಬಂಧಕ್ಕಾಗಿ ಗಂಡನನ್ನು ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿದ್ದು, ಅದೇ ಸಾಲಿಗೆ ಇನ್ನೊಂದು ಘಟನೆ ಸೇರಿಕೊಂಡಿದೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಹೃದಯವಿದ್ರಾವಕ ಈ ಭಯಾನಕ ಘಟನೆ ನಡೆದಿದೆ. ಕೊಸಿಕಲಾನ್ ಪ್ರದೇಶದಲ್ಲಿ ಓರ್ವ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನೇ ಕೊಂದು ಹಾಕಿದ್ದಾಳೆ. ಆರೋಪಿ ಪತ್ನಿಯ ಹಿಂದಿನ ಜೀವನ ಕೂಡ ಆಶ್ಚರ್ಯಕರವಾಗಿದೆ. ಅವಳಿಗೆ ಮದುವೆಗೂ ಮೊದಲೇ ಮೂವರು ಪ್ರಿಯಕರರಿದ್ದರು ಮತ್ತು ಪತಿಗೆ ಎಲ್ಲವೂ ತಿಳಿದಿತ್ತು. ಆದರೂ ಪತಿ ಕ್ಷಮಿಸಿದ್ದ… ಆದರೆ ಗಂಡನ ಈ ಔದಾರ್ಯಕ್ಕೆ ಅವನಿಗೆ ಕೊಲೆಯಾಗುವಂತಹ ಭಯಾನಕ ಪ್ರತಿಫಲ ಸಿಗುತ್ತದೆ ಎಂದು ಅವನು ಎಂದಿಗೂ ಊಹಿಸಿರಲಿಕ್ಕಿಲ್ಲ.

ಪೊಲೀಸರ ಪ್ರಕಾರ, ಐಂಚ್ ಗ್ರಾಮದ 27 ವರ್ಷದ ಗೋವಿಂದನಿಗೆ ತನ್ನ ಪತ್ನಿ ಕವಿತಾಳ ಚಟುವಟಿಕೆಗಳ ಬಗ್ಗೆ ಅನುಮಾನವಿತ್ತು. ಅವಳ ಹಿಂದಿನ ಸಂಬಂಧಗಳನ್ನು ಅವನು ಕಂಡು ಹಿಡಿದಿದ್ದನು. ಅವಳು ಸಿಕ್ಕಿ ಬಿದ್ದಾಗಲೆಲ್ಲಾ ಅವನು ಪ್ರತಿ ಬಾರಿಯೂ ಹೆಂಡತಿಯನ್ನು ಕ್ಷಮಿಸಿದ್ದನು. ಆದರೆ, ಈ ಬಾರಿ ಕವಿತಾಳ ಸಂಬಂಧ ಅದೇ ಗ್ರಾಮದ ಯುವಕ ಗುಂಜಾರ್ ಅಲಿಯಾಸ್ ಗುಲ್ಜಾರ್ ಜೊತೆ ಇತ್ತು. ಗೋವಿಂದ ಮತ್ತೆ ಮೋಸ ಹೋಗಬಾರದು ಎಂದು ಪತ್ನಿಯ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿದ್ದನು.

ಪತ್ನಿಯೇ ಕೊಲೆಗೆ ಸಿಗ್ನಲ್ ಕಳುಹಿಸಿದಳು

ಶುಕ್ರವಾರ ರಾತ್ರಿ ಕವಿತಾ ತನ್ನ ಪ್ರಿಯಕರ ಗುಂಜಾರ್‌ಗೆ ತನ್ನ ಗಂಡ ಗೋವಿಂದ ಕುಡಿದು ಹೊರಗೆ ಹೋಗಿದ್ದಾನೆ ಮತ್ತು ದಾರಿಯಲ್ಲಿ ಒಬ್ಬಂಟಿಯಾಗಿದ್ದಾನೆ ಎಂದು ತಿಳಿಸಿದಳು. ನಾವು ಒಟ್ಟಿಗೆ ಇರಬೇಕಾದರೆ ಗೋವಿಂದನನ್ನು ಇವತ್ತೇ ಮುಗಿಸಿಬಿಡು ಎಂದು ಅವಳು ಗುಂಜಾರ್‌ಗೆ ಹೇಳಿದಳು. ನಂತರ ಪ್ರಿಯಕರ ನಿರ್ಜನ ಸ್ಥಳದಲ್ಲಿ ಗೋವಿಂದನ ಮೇಲೆ ಬರ್ಚಿಯಿಂದ (ಒಂದು ಚೂಪಾದ ಆಯುಧ) ಹಲ್ಲೆ ನಡೆಸಿ ಅವನನ್ನು ಬರ್ಬರವಾಗಿ ಕೊಂದನು.

ಸಾವಿಗೆ ಮುನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ:

ಇನ್ನು ಹಲ್ಲೆಯ ಸಮಯದಲ್ಲಿ ಗೋವಿಂದ ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದನು. ಇದಕ್ಕಾಗಿ ತನ್ನ ಮೇಲೆ ಚೂಪಾದ ಆಯುಧದಿಂದ ದಾಳಿ ಮಾಡಿದ ಗುಂಜಾರ್ ಜೊತೆ ಹೋರಾಡಿದನು. ಆದರೆ ಗಾಯಗಳು ತುಂಬಾ ಗಂಭೀರವಾಗಿದ್ದರಿಂದ ಅವನು ಸ್ಥಳದಲ್ಲೇ ಸಾವನ್ನಪ್ಪಿದನು. ಕೊಲೆಯ ಆರೋಪಿ ಗುಂಜಾರ್ ತನ್ನ ರಕ್ತಸಿಕ್ತ ಟಿ-ಶರ್ಟ್, ಕೊಲೆಗೆ ಬಳಸಿದ ಬರ್ಚಿ ಮತ್ತು ಮೊಬೈಲ್ ಅನ್ನು ಎಸೆಯಲು ಪ್ರಯತ್ನಿಸಿದನು. ಆದರೆ ಪೊಲೀಸರು ಎಲ್ಲವನ್ನೂ ವಶಪಡಿಸಿಕೊಂಡರು.

ಇಲ್ಲಿಯವರೆಗಿನ ಅತ್ಯಂತ ಆಘಾತಕಾರಿ ಸತ್ಯಾಂಶ ಬಹಿರಂಗ:

ಪೊಲೀಸ್ ತನಿಖೆಯಲ್ಲಿ ಕವಿತಾಳಿಗೆ ಒಬ್ಬರಲ್ಲ, ಮೂವರು ಪುರುಷರೊಂದಿಗೆ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ. ಅವಳಿಗೆ ತನ್ನ ಸಂಬಂಧಿ, ಗ್ರಾಮದ ದೇವರ ಪೂಜಾರಿ ಯುವಕ ಮತ್ತು ಬರ್ಸಾನಾದ ಹುಡುಗನೊಂದಿಗೆ ಸಂಬಂಧವಿತ್ತು. ಈ ಸಂಬಂಧಗಳಿಂದಾಗಿ 2020ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಆಗ ಪತಿ ಅವಳನ್ನು ಕ್ಷಮಿಸಿದ್ದ. ಆಕೆಗೆ ಅನೈತಿಕ ಸಂಬಂಧಗಳು ಇದ್ದರೂ, ಹರೆಯ ವಯಸ್ಸಿನಲ್ಲಿ ಇದೆಲ್ಲವೂ ಸಾಮಾನ್ಯ, ಮಕ್ಕಳಾದ ನಂತರ ಹಾಗೂ ವಯಸ್ಸು ಮುಪ್ಪಾದಂತೆ ಸರಿ ಹೋಗಬಹುದು ಎಂದು ನಿರೀಕ್ಷಿಸಿದ್ದನು. ಇದೀಗ ಹೆಂಡತಿಯನ್ನು ಕ್ಷಮಿಸಿದ್ದೇ ಜೀವಕ್ಕೆ ಮುಳ್ಳಾಗಿ ಹೋಗಿದೆ.

ಇಬ್ಬರು ಆರೋಪಿಗಳ ಬಂಧನ:

ಪೊಲೀಸರು ಶುಕ್ರವಾರ ಕವಿತಾ ಮತ್ತು ಆಕೆಯ ಪ್ರಿಯಕರ ಗುಂಜಾರ್‌ನನ್ನು ಬಂಧಿಸಿದ್ದಾರೆ. ಕೊಲೆಯಲ್ಲಿ ಬಳಸಿದ ಆಯುಧ ಮತ್ತು ಇತರ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಯುತ್ತಿದೆ ಮತ್ತು ಸಂಪೂರ್ಣ ಪ್ರಕರಣದ ಆಳವಾದ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here