ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ನೀರಿನ ಬಳಕೆ ಹೆಚ್ಚಾಗುತ್ತದೆ. ಬಹುತೇಕ ಮನೆಗಳಲ್ಲಿ ನೀರನ್ನು ಸಂಗ್ರಹಿಸಲು ಓವರ್‌ಹೆಡ್ ಟ್ಯಾಂಕ್‌ಗಳನ್ನು ಬಳಸಲಾಗುತ್ತದೆ. ಆದರೆ, ಈ ಟ್ಯಾಂಕ್‌ಗಳನ್ನು ಸರಿಯಾದ ಸಮಯಕ್ಕೆ ಸ್ವಚ್ಛಗೊಳಿಸದಿದ್ದರೆ ಅದರಲ್ಲಿ ಮಣ್ಣು, ಪಾಚಿ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ.
ಸಾಮಾನ್ಯವಾಗಿ ಟ್ಯಾಂಕ್ ಸ್ವಚ್ಛಗೊಳಿಸುವುದು ಎಂದರೆ ದೊಡ್ಡ ಕೆಲಸ. ಟ್ಯಾಂಕ್ ಒಳಗಿಳಿದು ಗಂಟೆಗಟ್ಟಲೆ ಉಜ್ಜಬೇಕು, ಇದರಿಂದ ಮೈ ಕೈ ನೋವು ಖಂಡಿತ ಆದರೆ ಈಗ ವೈರಲ್ ಆಗುತ್ತಿರುವ ಒಂದು ‘ದೇಸಿ ಜುಗಾಡ್’ ಮೂಲಕ ಟ್ಯಾಂಕ್ ಒಳಗಿಳಿಯದೆಯೇ ಕೇವಲ ಎರಡೇ ನಿಮಿಷದಲ್ಲಿ ಅಡಿಭಾಗದಲ್ಲಿರುವ ಕಸವನ್ನು ತೆಗೆಯಬಹುದು.
ಈ ಸುಲಭ ವಿಧಾನಕ್ಕೆ ಬೇಕಾಗುವ ವಸ್ತುಗಳು :
ಒಂದು ಖಾಲಿ ಪ್ಲಾಸ್ಟಿಕ್ ಬಾಟಲಿ, ಒಂದು ಉದ್ದನೆಯ ಪ್ಲಾಸ್ಟಿಕ್ ಪೈಪ್,ಸೆಲ್ಲೋ ಟೇಪ್ ಅಥವಾ ಗಮ್
ತಯಾರಿಸುವ ವಿಧಾನ : ಮೊದಲು ಪ್ಲಾಸ್ಟಿಕ್ ಬಾಟಲಿಯನ್ನು ಮಧ್ಯಕ್ಕೆ ಕತ್ತರಿಸಿ. ಬಾಟಲಿಯ ಮೇಲ್ಭಾಗ (ಮುಚ್ಚಳ ಇರುವ ಭಾಗ) ಮಾತ್ರ ಬೇಕು. ಈಗ ಬಾಟಲಿಯ ಮುಚ್ಚಳದ ಭಾಗಕ್ಕೆ ಪ್ಲಾಸ್ಟಿಕ್ ಪೈಪ್ ಅನ್ನು ಜೋಡಿಸಿ. ಗಾಳಿ ಹೋಗದಂತೆ ಸೆಲ್ಲೋ ಟೇಪ್‌ನಿಂದ ಗಟ್ಟಿಯಾಗಿ ಸುತ್ತಿ. ಪೈಪ್‌ನ ಇನ್ನೊಂದು ತುದಿಯನ್ನು ಟ್ಯಾಂಕ್‌ನಿಂದ ಹೊರಗೆ, ಕೆಳಮಟ್ಟಕ್ಕೆ ಇರಿಸಿ. ಮೊದಲು ಪೈಪ್‌ನಲ್ಲಿ ನೀರು ತುಂಬಿಸಿ (ವ್ಯಾಕ್ಯೂಮ್ ಸೃಷ್ಟಿಸಲು), ಬಾಟಲಿ ಇರುವ ತುದಿಯನ್ನು ಟ್ಯಾಂಕ್‌ನ ಅಡಿಯಲ್ಲಿರುವ ಮಣ್ಣಿನ ಮೇಲೆ ಇರಿಸಿ.
ಇದು ವ್ಯಾಕ್ಯೂಮ್ ಕ್ಲೀನರ್‌ನಂತೆ ಕೆಲಸ ಮಾಡುತ್ತದೆ. ನೀವು ಬಾಟಲಿಯನ್ನು ಮಣ್ಣಿನ ಮೇಲೆ ಸರಿಸುತ್ತಿದ್ದಂತೆ, ಟ್ಯಾಂಕ್‌ನಲ್ಲಿರುವ ಒಳ್ಳೆಯ ನೀರು ವ್ಯರ್ಥವಾಗದೆ ಕೇವಲ ಅಡಿಯಲ್ಲಿ ಸಂಗ್ರಹವಾಗಿರುವ ಮಣ್ಣು ಮತ್ತು ಕಸ ಮಾತ್ರ ಪೈಪ್ ಮೂಲಕ ಹೊರಬರುತ್ತದೆ.
ಜಿಗುಟು ಹೋಗಲಾಡಿಸಲು : ಟ್ಯಾಂಕ್ ಗೋಡೆಗಳಿಗೆ ಅಂಟಿಕೊಂಡಿರುವ ಜಿಗುಟು ಅಥವಾ ಪಾಚಿಯನ್ನು ತೆಗೆಯಲು ಅಡುಗೆ ಸೋಡಾ (Baking Soda) ಮತ್ತು ಲಿಂಬೆ ರಸದ ಮಿಶ್ರಣವನ್ನು ಬಳಸಬಹುದು.
ಜೀವಾಣು ನಾಶಕ್ಕೆ : ನೀರು ಶುದ್ಧವಾಗಿರಲು ಕ್ಲೋರಿನ್ ಟ್ಯಾಬ್ಲೆಟ್‌ಗಳನ್ನು ಬಳಸಬಹುದು.
ಈ ಸರಳ ಮತ್ತು ಖರ್ಚಿಲ್ಲದ ವಿಧಾನವನ್ನು ಅನುಸರಿಸುವ ಮೂಲಕ ನೀವು ಶ್ರಮವಿಲ್ಲದೆ ಮನೆಯ ನೀರಿನ ಟ್ಯಾಂಕ್ ಅನ್ನು ಪಳಪಳ ಹೊಳೆಯುವಂತೆ ಮಾಡಬಹುದು.

