ಕೇರಳದ ನರ್ಸ್​ ನಿಮಿಷಾ ಪ್ರಿಯಾ ಪ್ರಕರಣದ ಕುರಿತು ಸುಪ್ರೀಂ ಇಂದು ವಿಚಾರಣೆ

0
20

ನವದೆಹಲಿ: ಯೆಮೆನ್​​ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್​ ನಿಮಿಷಾ ಪ್ರಿಯಾ ಪ್ರಕರಣದ ಕುರಿತು ಸುಪ್ರೀಂಕೋರ್ಟ್​ ಇಂದು ವಿಚಾರಣೆ ನಡೆಸಲಿದೆ. ನಿಮಿಷಾ ಪ್ರಿಯಾರಿಗೆ ಕ್ಷಮಾದಾನ ನೀಡುವುದು, ಸಂತ್ರಸ್ತರ ಕುಟುಂಬದೊಂದಿಗೆ ಮಾತುಕತೆ ನಡೆಸಲು ರಾಜತಾಂತ್ರಿಕ-ಮಧ್ಯಸ್ಥಿಕೆ ತಂಡವನ್ನು ನೇಮಿಸಲು ಸೇವ್ ನಿಮಿಷಾ ಪ್ರಿಯಾ ಇಂಟರ್​ನ್ಯಾಷನಲ್ ಆಕ್ಷ್ಯನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ಇಂದು ಕೈಗೆತ್ತಿಕೊಳ್ಳಲಿದೆ.

ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್‌ನ ಕೋರ್ ಕಮಿಟಿ ಸದಸ್ಯ ದಿನೇಶ್ ನಾಯರ್, ಕೇರಳದಲ್ಲಿರುವ ನಿಮಿಷಾ ಪ್ರಿಯಾ ಅವರ ಮಗಳು ಮತ್ತು ಅವರ ವಯಸ್ಸಾದ ತಾಯಿಯ ಸ್ಥಿತಿಯನ್ನು ಪರಿಗಣಿಸಿ, ಅವರ ಜೀವವನ್ನು ಉಳಿಸಲು ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡುತ್ತೇವೆ ಎಂದರು.

ಪ್ರಕರಣದ ಹಿನ್ನೆಲೆ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರು 2017 ರಲ್ಲಿ ತಮ್ಮ ಯೆಮೆನ್ ಬಿಜಿನೆಸ್ ಪಾರ್ಟ್ನರ್ ತಲಾಲ್ ಅಬ್ದೋ ಮೆಹ್ದಿ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾಗದ್ದರು. ಅವರಿಗೆ ಮರಣದಂಡನೆ ವಿಧಿಸಲಾಯಿತು ಮತ್ತು ಮೇಲ್ಮನವಿ ಸಲ್ಲಿಸುವ ಪ್ರಯತ್ನಗಳ ಹೊರತಾಗಿಯೂ, ಯೆಮೆನ್‌ನ ಉನ್ನತ ನ್ಯಾಯಾಲಯಗಳು ಅವರ ಶಿಕ್ಷೆಯನ್ನು ಎತ್ತಿಹಿಡಿದವು. ಈಗ ಅವರ ಬಿಡುಗಡೆಗೆ ಇರುವ ಏಕೈಕ ಆಶಯವೆಂದರೆ ಯೆಮೆನ್‌ನ ಶರಿಯಾ ಕಾನೂನಿನಡಿಯಲ್ಲಿ ಅನುಮತಿಸಲಾದ ಬ್ಲಡ್ ಮನಿ ಒಪ್ಪಂದದ ಮೂಲಕ ಮೆಹ್ದಿಯ ಖಚಿತವಾಗಲಿದೆ.

LEAVE A REPLY

Please enter your comment!
Please enter your name here