ಕಂಬಳದ ಪರ ಸುಪ್ರೀಂ ಕೋರ್ಟ್ ತೀರ್ಪು: ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ದಿನ – ಲೋಕೇಶ್ ಶೆಟ್ಟಿ

0
1

ಮೂಲ್ಕಿ: ಕಂಬಳ ಕೇವಲತುಳುನಾಡಿಗೆ ಭಾಗಕ್ಕೆ ಮಾತ್ರ ಸೀಮಿತವಲ್ಲ, ಅದು ಇಡೀ ದೇಶದ ಹೆಮ್ಮೆ ಎಂದು ಸಾರುವ ಮೂಲಕ ಸುಪ್ರೀಂ ಕೋರ್ಟ್‌ ತೀರ್ಪನ್ನು ನೀಡಿದ್ದು ಕಂಬಳದ ಇತಿಹಾಸದಲ್ಲಿ ಒಂದು “ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ದಿನ” ಎಂದು ರಾಜ್ಯ ಕಂಬಳ ಅಸೋಸಿಯೇಶನ್‌ ಕೋಶಾಧಿಕಾರಿ ಮುಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಕಂಬಳದ ಉಳಿವಿಗಾಗಿ ಹೋರಾಡಿದ ಕಂಬಳ ಅಸೋಶಿಯೇಶನ್,ಸಮಿತಿ, ಕಂಬಳದ ವ್ಯವಸ್ಥಾಪಕರು, ಕೋಣಗಳ ಯಜಮಾನರು, ಅಭಿಮಾನಿಗಳು ಮತ್ತು ಕಂಬಳ ಪ್ರೇಮಿಗಳ ದಶಕಗಳ ಶ್ರಮಕ್ಕೆ ನ್ಯಾಯ ಸಿಕ್ಕಿದೆ. ರಾಜ್ಯ ಕಂಬಳ ಅಸೋಶಿಯೇಶನ್ ಅಧ್ಯಕ್ಷ ಡಾ.ಬೆಳಪು ದೇವಿಪ್ರಸಾದ್‌ ಶೆಟ್ಟಿ, ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾ‌ರ್ ರೈಮತ್ತು ನೇತೃತ್ವದಲ್ಲಿ ನಡೆದ ಕಾನೂನು ಹೋರಾಟ ಮತ್ತು ಸಂಘಟನೆಗೆ ದೊಡ್ಡ ಮಟ್ಟದ ಯಶಸ್ಸು ದೊರೆತಿದೆ

LEAVE A REPLY

Please enter your comment!
Please enter your name here