ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕಲಾಕುಂಚ ಕೇರಳ ಗಡಿನಾಡ ಶಾಖೆಯ ಆಶ್ರಯದಲ್ಲಿ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಮೊಟ್ಟಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ 163ನೇ ಜನ್ಮ ದಿನಾಚರಣೆ ಪ್ರಯುಕ್ತ ಈ ಸಮಾರಂಭ ಹಮ್ಮಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ|| ಪ್ರಮೀಳಾ ಮಾಧವ್ ಮಾತನಾಡಿ ಮಂಜೇಶ್ವರ ಗೋವಿಂದ ಪೈ ಅವರ ಉನ್ನತ ವ್ಯಕ್ತಿತ್ವ 22 ಭಾಷೆಗಳನ್ನು ಕಲಿತು 40ಕ್ಕೂ ಮಿಕ್ಕಿದ ಭಾಷೆಗಳ ಕೃತಿಗಳನ್ನು ಪರಾಮರ್ಶೆ ಮಾಡಿ ಸಂಶೋಧನೆಯ ಮೂಲಕ ಗಮನ ಸೆಳೆದರು. ಸೃಜನಶೀಲ ಕೃತಿಗಳ ರಚನೆಯಲ್ಲೂ ಕೆಲವು ಪ್ರಥಮಗಳ ಸರದಾರರಾಗಿದ್ದು ಯಕ್ಷಗಾನ ಸೇರಿದಂತೆ ಆಗರ್ಭ ಶ್ರೀಮಂತ ಮನೆಯ ಏಳು ಮಕ್ಕಳ ಹಿರಿಯನಾಗಿದ್ದು ಆ ಕಾಲದಲ್ಲಿ ಲಭ್ಯವಿದ್ದ ಉನ್ನತ ಶಿಕ್ಷಣ ಹೊಂದಿ ಕನ್ನಡ ಭಾಷೆಗೆ ಮಾನ್ಯತೆ ಕೊಟ್ಟರು ಎಂದು ತಮ್ಮ ಅಂತರಾಳ ಮಾತುಗಳನ್ನು ವ್ಯಕ್ತಪಡಿಸಿದರು.
ಮಂಜೇಶ್ವರ ರಾಷ್ಟçಕವಿ ಗೋವಿಂದ ಪೈಯವರ ಜನ್ಮದಿನದಂದು ಕಲಾಕುಂಚ ಕೇರಳ ಗಡಿನಾಡ ಶಾಖೆಯ ಪ್ರಥಮ ಅಧ್ಯಕ್ಷೆ ಜಯಲಕ್ಷ್ಮೀ ಕಾರಂತ್ ಸಮಾರಂಭದ ಉದ್ಘಾಟನೆ ಮಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪ್ರಾಚಾರ್ಯರಾದ ಡಾ|| ಮಹಮ್ಮದಾಲಿ ಮಾತನಾಡಿ, ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕೇರಳ ಗಡಿನಾಡ ಶಾಖೆ ಮಾಡಿದ್ದು ಶ್ಲಾಘನೀಯ. ದೇಶದ ಮೊಟ್ಟಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಸಾಧನೆ ಎಲ್ಲರಿಗೂ ಮಾದರಿ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ್ ಜಯಂತಿ, ಡಾ|| ರಾಜೇಶ್ ಮುಂತಾದವರು ಉಪಸ್ಥಿತರಿದ್ದು , ಕಾಲೇಜಿನ ವಿದ್ಯಾರ್ಥಿಗಳೇ ತಯಾರು ಮಾಡಿದ “ಕನ್ನಡ ಚೈತ್ರ’’ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದರು.
ಸಮಾರಂಭದ ಪ್ರಾರಂಭದಲ್ಲಿ ಗೋವಿಂದ ಪೈ ಅವರ ಪ್ರತಿಮೆಗೆ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಾಲೇಜಿನ ಪ್ರಾಚಾರ್ಯರು ಸೇರಿದಂತೆ ಶಿಕ್ಷಕ ಶಿಕ್ಷಕರು ಕಲಾಕುಂಚದ ಗಣ್ಯ ಮಾನ್ಯರು ಪುಷ್ಪಾರ್ಚನೆ ಮಾಡಿದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿ ಸಮಾರಂಭ ಪ್ರಾರಂಭಿಸಿದರು. ಪ್ರೊ|| ಶಿವಶಂಕರ್ ಸ್ವಾಗತಿಸಿದರು, ಕನ್ನಡ ಪ್ರಾಧ್ಯಾಪಕಿ ಜಯಂತಿ ಸಮಾರಂಭ ನಿರೂಪಣೆ ಮಾಡಿ ನಿರ್ವಹಿಸಿದರು. ಡಾ|| ಸುಜೇಶ್ ವಂದನಾರ್ಪಣೆ ಮಾಡಿದರು.

