ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮದ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠದ ಭಜನಾ ಸಭಾಂಗಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿರುವ 3.ಲಕ್ಷ ರೂಪಾಯಿ ಡಿ.ಡಿ ಯನ್ನು ಹೆಬ್ರಿ ತಾಲ್ಲೂಕಿನ ಯೋಜನಾಧಿಕಾರಿ ಲೀಲಾವತಿ ಅವರು ಸಮಿತಿ ಬುಧವಾರ ಹಸ್ತಾಂತರಿಸಿದರು.

ಸೂರಿಮಣ್ಣು ಮಠಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ೩ ಲಕ್ಷ ನೆರವು.
ಶಿವಪುರ ಸೂರಿಮಣ್ಣು : ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮದ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠದ ಭಜನಾ ಸಭಾಂಗಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿರುವ 3.ಲಕ್ಷ ರೂಪಾಯಿ ಡಿ.ಡಿ ಯನ್ನು ಹೆಬ್ರಿ ತಾಲ್ಲೂಕಿನ ಯೋಜನಾಧಿಕಾರಿ ಲೀಲಾವತಿ ಅವರು ಸಮಿತಿ ಬುಧವಾರ ಹಸ್ತಾಂತರಿಸಿದರು.
ಸೂರಿಮಣ್ಣು ಮಠದ ಆಡಳಿತ ಮೋಕ್ತೇಸರರಾದ ಭಜನಾ ಸುವರ್ಣ ಸಂಭ್ರಮದ ರೂವಾರಿ ಗೌರವಾಧ್ಯಕ್ಷ ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ, ಜೊತೆ ಕಾರ್ಯದರ್ಶಿ ಸುಭಾಶ್ಚಂದ್ರ ನಾಯ್ಕ್, ಕೊಶಾಧಿಕಾರಿ ಪ್ರಸನ್ನ ಶೆಟ್ಟಿ ಒಂಬತೊಕ್ಲು, ಉಪಾಧ್ಯಕ್ಷ ದಿನೇಶ ಶೆಟ್ಟಿ ಸೂರಿಮಣ್ಣು, ಪ್ರಮುಖರಾದ ಸುಗಂಧಿ ನಾಯ್ಕ್, ಒಕ್ಕೂಟ ಅಧ್ಯಕ್ಷೆ ವಂದನಾ, ಮೇಲ್ವಿಚಾರಕಿ ರೇವತಿ, ಸೇವಾಪ್ರತಿನಿಧಿ ಮಂಜುನಾಥ್, ಒಕ್ಕೂಟದ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ಪ್ರಮುಖರು ಹಾಜರಿದ್ದರು. ಸೂರಿಮಣ್ಣು ಮಠದ ವಿದ್ವಾನ್ ರವಿರಾಜ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

