ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಂದ ಪ್ರಶಸ್ತಿ ಪ್ರದಾನ
ಸುಮಾರು 500ವರ್ಷಗಳ ಹಿಂದೆ, ಹುಟ್ಟಿದ ನಾಡಿಗಾಗಿ ತನ್ನ ಪ್ರಾಣವನ್ನೇ ಅರ್ಪಣೆ ಗೈದ “ದೇಯಿ ಬೈದೆತಿ” ಎಂಬ ಒಬ್ಬ “ಸಾಮಾನ್ಯ ಮಹಿಳೆಯ ಅಸಾಮಾನ್ಯ ಸತ್ಯ ಕಥೆ”

ಹದಿನೈದನೇ ಶತಮಾನದ ಆರಂಭದಲ್ಲಿ ಪಡುಮಲೆ ರಾಜ್ಯದ ಈಗಿನ ಪುತ್ತೂರಿನ ಏರಾಜೆ ಬರ್ಕೆ ಎಂಬಲ್ಲಿ ನಡೆದಿದೆ ಎನ್ನಲಾದ ಈ ಐತಿಹಾಸಿಕ ಕಥೆಯು, ತುಳುನಾಡಿನ ಜನಪದ ಇತಿಹಾಸದ ಮೌಖಿಕ ಮಹಾಕಾವ್ಯ “ಕೋಟಿ-ಚೆನ್ನಯರ ಪಾರ್ದನ”ದ “ಬೈದೆರ್ಲ ಸಂದಿ”ಯಿಂದ ಆರಿಸಲಾಗಿದೆ.
ದೇಯಿ ಬೈದೆತಿ ಚಲನಚಿತ್ರದ ರಾಜ್ಯ ಪ್ರಶಸ್ತಿಯ ಹಿರಿಮೆಯನ್ನು ಈ ಕರಾವಳಿ ಕರ್ನಾಟಕದಲ್ಲಿ ಹರಡಿಕೊಂಡಿರುವ ಜನಪದ ಕಲಾವಿದರಾದ ಪಂಪದೆರ್,ಪರವೆರ್, ನಲ್ಕೆದಗುಲು, ಹಾಗೂ ದೇಯಿ ಬೈದೆತಿ ಕಥೆಯನ್ನು ಬಾಯಿಯಿಂದ ಬಾಯಿಗೆ ಪಾರ್ದನದ ಮೂಲಕ ಹರಿಸಿ ,ಇರಿಸಿದ
ಹಾಗೂ ತಮ್ಮ ದಿನನಿತ್ಯದ ಬದುಕಿನಲ್ಲಿಯೇ ಈ ಪಾರ್ದನವನ್ನು ಅಳವಡಿಸಿಕೊಂಡು ಬದುಕಿದ.. ನಾಡಿನ ಪ್ರತಿಯೊಬ್ಬ ಹಿರಿ ಜೀವಗಳಿಗೆ ಅರ್ಪಣೆ.

ಸೂರ್ಯೋದಯ ಪೆರಂಪಳ್ಳಿಯವರು ತನ್ನ ತಾಯಿ ಸಂಕ್ರಿಯ ಹೆಸರಲ್ಲಿ ಹೊಂ ಬ್ಯಾನರ್ ಸಂಕ್ರಿ ಮೋಷನ್ ಪಿಕ್ಚರ್ಸ್ ಲಾಂಛನದ ಅಡಿಯಲ್ಲಿ ನಿರ್ಮಿಸಿ ನಿರ್ದೇಶಿಸಿದ ದೇಯಿ ಬೈದೆತಿ ಚಲನಚಿತ್ರವು ಆಂಟ್ರಾಂಟ್ರೆ ಮಜಲ್’ಡು ಪಾಂತೆ ರಾವುಂಡು ಗೀತೆಯನ್ನು ಹಾಡಿದ ಗಾಯಕಿ ಕಲಾವತಿ ದಯಾನಂದ್ ರವರಿಗೂ ರಾಜ್ಯ ಪ್ರಶಸ್ತಿ ಲಬಿಸಿರುವುದು ಮತ್ತೊಂದು ವಿಶೇಷ..
ತುಳುನಾಡಿನ ಸತ್ಯ ಕಥೆಗಳಲ್ಲಿ ಪ್ರಮುಖವಾಗಿರುವ ಸತ್ಯ ಧರ್ಮದ ಅವಳಿ ವೀರಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಕಥೆಯನ್ನು ಆಧರಿಸಿ ಮೂಲಸ್ಥಾನ ಗೆಜ್ಜೆಗಿರಿಯ ಸತ್ಯದ ಮಣ್ಣಿನ ಮಹಿಮೆಯನ್ನು ಜಗಕ್ಕೆ ಪಸರಿಸಿದ ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು ಚಲನ ಚಿತ್ರದ ನಿರ್ಮಾಪಕ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಯವರು ಅತ್ಯುತ್ತಮ ಚಲನಚಿತ್ರ ರಾಜ್ಯ ಪ್ರಶಸ್ತಿ ಹಾಗೂ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿರುವುದು ಸಂತೋಷದ ವಿಷಯ…ಊರ ಪರಊರ ಅಭಿಮಾನಿಗಳು ಮತ್ತು ತುಳುನಾಡ ತುಳುವೆರ್, ಕಲ್ಯಾಣ್ ಸಂಸ್ಥೆಯ ಸಂಸ್ಥಾಪಕ ಅಶೋಕ್ ಎಲ್ ಪೂಜಾರಿ ಉಳ್ಯ ಗುತ್ತು ಪಂಜ – ಕೊಯಿಕುಡೆ ಇವರು ಅಭಿನಂದಿಸಿದರು.

