ಸ್ಫೂರ್ತಿ ವಿಶೇಷ ಮಕ್ಕಳ ಶಾಲೆ: ಶಾಲಾ ವಾಹನ ಖರೀದಿಗೆ ಆರ್ಥಿಕ ಸಹಾಯಕ್ಕೆ ಮನವಿ

0
9

ಮೂಡುಬಿದಿರೆ: ಇಲ್ಲಿಯ ಬೆಳುವಾಯಿ ಕೆಸರುಗದ್ದೆಯಲ್ಲಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಗೆ ನೂತನ ಶಾಲಾ ವಾಹನದ ಅವಶ್ಯಕತೆ ಇದ್ದು, ಅದರ ಖರೀದಿಗೆ ಆರ್ಥಿಕ ಸಹಾಯ ಮಾಡುವಂತೆ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್‌ ಜೆ. ಶೆಟ್ಟಿಗಾರ್‌ ದಾನಿಗಳಲ್ಲಿ ಮನವಿ ಮಾಡಿದ್ದಾರೆ.

ಮೂಡುಬಿದಿರೆ ಹಾಗೂ ಆಸುಪಾಸಿನ ಗ್ರಾಮಾಂತರ ಪ್ರದೇಶದ ೮೫ ಮಂದಿ ವಿಶೇಷ ಚೇತನ ಮಕ್ಕಳಿಗೆ ದಾನಿಗಳ ನೆರವಿನಿಂದ ಉಚಿತವಾಗಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಆದರೆ ಮಕ್ಕಳನ್ನು ಮನೆಯಿಂದ ಕರೆತರಲು ವಾಹನ ಇರುವುದಿಲ್ಲ. ಈ ಯೋಜನೆಗೆ ಸುಮಾರು ರೂ. ೮.೫೦ ಲಕ್ಷ ರೂ. ಬೇಕಾಗಿದ್ದು, ದಾನಿಗಳು ಹಾಗೂ ಸಂಘ ಸಂಸ್ಥೆಗಳು ವಿಶೇಷ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಾಯವಾಗುವ ನಿಟ್ಟಿನಲ್ಲಿ ಆರ್ಥಿಕ ಸಹಾಯ ಮಾಡುವಂತೆ ಆರ್ಥಿಕ ಸಹಾಯ ಮಾಡುವಂತೆ ಅವರು ವಿನಂತಿಸಿದ್ದಾರೆ. ಈಗಾಗಲೇ ರೂ. ೨.೬೮ರಷ್ಟು ಹಣ ಸಂಗ್ರಹವಾಗಿದೆ. ಅರ್ಥಿಕ ಸಹಾಯ ಮಾಡುವವರು Rejuvenate child Foundation (R.), A/c. No.: 36556587667 (IFSC Code: SBIN0005623) Moodabidri Branch ಗೆ ಹಣ ಸಂದಾಯ ಮಾಡಬಹುದು ಅಥವಾ 9900710209, 8660636023 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here