ಮಂಗಳೂರು ರಾಮಕೃಷ್ಣ ಮಿಷನ್ ಗೆ 75 ವರ್ಷ ಪೂರ್ಣಗೊಂಡ ಹಿನ್ನೆಲೆ
ಸೆಪ್ಟೆಂಬರ್ 13, 14 ಹಾಗೂ 15 ರಂದು ಮಂಗಳೂರಿನಲ್ಲಿ ವಾಸ್ತವ್ಯ
ಅಮೃತಭವನ ಲೋಕಾರ್ಪಣೆ ಒಳಗೊಂಡAತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಮಂಗಳೂರು ರಾಮಕೃಷ್ಣ ಮಿಷನ್ 1951 ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಕಳೆದ 75 ವರ್ಷಗಳಿಂದ ನಿರಂತರವಾಗಿ ಹತ್ತು ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೇವೆಯಲ್ಲಿ ನಿರತವಾಗಿದೆ. ಇದೀಗ 75 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸುತ್ತಿರುವ ಮಂಗಳೂರಿನ ರಾಮಕೃಷ್ಣ ಮಿಷನ್ ನ ಅಮೃತ ಮಹೋತ್ಸವನ್ನು 14 ಸೆಪ್ಟೆಂಬರ್ 2025 ರಂದುಆಚರಿಸಲಿದೆ. ಈ ಸಂದರ್ಭದಲ್ಲಿರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ನ ಉಪಾಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಸುಹಿತಾನಂದಜಿ ಮಹಾರಾಜ್‌ಅವರು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ಗೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 13, 14 ಹಾಗೂ 15 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆಪ್ಟೆಂಬರ್ 12 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ನ ಕೇಂದ್ರಕಚೇರಿಯಿAದ ವಿಮಾನದ ಮೂಲಕ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಸ್ವಾಮೀಜಿಯವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲಾಗುವುದು. ನಂತರ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠಕ್ಕೆ ಆಗಮಿಸಿ ಪೂಜ್ಯ ಸ್ವಾಮೀಜಿಯವರುಅಲ್ಲಿವಾಸ್ತವ್ಯವಿರಲಿದ್ದಾರೆ. 13 ಸೆಪ್ಟೆಂಬರ್ 2025 ರಂದುರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ ನಡೆಯಲಿರುವ “ಪ್ರಜ್ಞಾ 2025” ಕಾರ್ಯಾಗಾರವನ್ನುಉದ್ಘಾಟಿಸಲಿದ್ದಾರೆ. 14 ಸೆಪ್ಟೆಂಬರ್ 2025 ರಂದುರಾಮಕೃಷ್ಣ ಮಿಷನ್ ನ 75 ನೇ ವರ್ಷದ ಸವಿನೆನಪಿಗಾಗಿ ನಿರ್ಮಾಣಗೊಂಡ ಅಮೃತಭವನದ ಲೋಕಾರ್ಪಣೆ ಹಾಗೂ ವಿವೇಕಾನಂದಅಧ್ಯಯನಕೇಂದ್ರದ ತರಗತಿ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.ಹಾಗೆಯೇಅಮೃತವರ್ಷದ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷದಕಾಲಾವಧಿಯಲ್ಲಿ ನಡೆಸಲಾಗುವ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಸೆಪ್ಟೆಂಬರ್ 16 ರಂದು ಹಿಂತಿರುಗಲಿದ್ದಾರೆ.