ಗುರುವಾಯನಕೆರೆ ::ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್( R) ಗುರುವಾಯನಕೆರೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇದರ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಗಳ ವಿರುದ್ಧ ಜಾಗೃತಿ ಮೂಡಿಸುವ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಾರದಾ ರೈಯವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಡಾ!!ನವೀನ್ ಮರಿಕೆ ಇವರು ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ರವರು ಕಾಲೇಜ್ ವಿದ್ಯಾರ್ಥಿಗಳಿಗೆ, ದುಶ್ಚಟಗಳಿಗೆ ಬಲಿಯಾದ ವಿದ್ಯಾರ್ಥಿಗಳ ಬದುಕು ಬಲು ನರಕದ ಬದುಕು, ಅಮಲು ಸೇವನೆಯಿಂದ ಮರಣ, ಅಪಘಾತ, ಆತ್ಮಹತ್ಯೆ ಮುಂತಾದವು ಸಂಭವಿಸುತ್ತದೆ. ಪೋಷಕರಿಗೆ ತಮ್ಮ ಮಕ್ಕಳು ಮಾಣಿಕ್ಯವಿದ್ದಂತೆ ಆದ್ದರಿಂದ ಶಾಲಾ ಕಾಲೇಜುಗಳು ಶಿಕ್ಷಣದ ಪಾಠವನ್ನು ಹೇಳಿಕೊಟ್ಟರೆ, ಸ್ವಾಸ್ಥ್ಯ ಸಂಕಲ್ಪದಂತ ಕಾರ್ಯಕ್ರಮಗಳು ಮೌಲ್ಯ ದಾರಿತ ಜೀವನದ ಪಾಠಗಳನ್ನು ಹೇಳಿಕೊಡುತ್ತವೆ ಎಂಬ ಬಹಳ ಅರ್ಥಪೂರ್ಣವಾದ ಮಾಹಿತಿ ನೀಡಿದರು, ಹಾಗೂ ವಿದ್ಯಾರ್ಥಿಗಳು ದುರಭ್ಯಾಸಗಳಿಗೆ ಬಲಿಯಾಗದಂತೆ ಪೋಷಣೆಗಳನ್ನು ಹೇಳಿಸಲಾಯಿತು
ಶ್ರೀ. ಕ್ಷೇ. ಧ. ಗ್ರಾ ಯೋಜನೆ B C ಟ್ರಸ್ಟ್ (R) ಗುರುವಾಯನಕೆರೆ ತಾಲೂಕಿನ ಮಾನ್ಯ ಯೋಜನಾಧಿಕಾರಿಯವರಾದ ಶ್ರೀ ಅಶೋಕ್ ರವರು ಕಾರ್ಯಕ್ರಮ ದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜ್ ಶಿಕ್ಷಕರಾದ ವರುಣ್ ಮತ್ತು ಜಯರಾಮರವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜ್ ವಿದ್ಯಾರ್ಥಿನಿ ಪ್ರಾರ್ಥಿಸಿದರು,ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಗುರುವಾಯನಕೆರೆ ವಲಯದ ಮೇಲ್ವಿಚಾರಕಿಯಾ ದ ಯಶೋಧ ಧನ್ಯವಾದ ಮಾಡಿದರು. ಸೇವಾ ಪ್ರತಿನಿಧಿ ಭಾರತೀ, ಕಾಲೇಜು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.