ರಾಜೀವ್ ಬಿ. ಹೆಚ್. ನಿರ್ದೇಶನದ “ತಾಕತ್” ಬಿಡುಗಡೆ

0
22

ಬೆಳ್ತಂಗಡಿ: ರಾಜೀವ್ ಬಿ. ಹೆಚ್ ನಿರ್ದೇಶನದ “ತಾಕತ್” ಟೆಲಿ ಚಿತ್ರವನ್ನು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರಾದ ಸುಮಂತ್ ಕುಮಾರ್ ಜೈನ್ ಇವರು ಬುಧವಾರ ಬಿಡುಗಡೆ ಮಾಡಿದರು.
ಇಂದಿನ ಯುವ ಜನತೆ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು ನಿಜಕ್ಕೂ ಆಘಾತಕಾರಿ ವಿಚಾರ, ಈ ಹಿನ್ನಲೆಯಲ್ಲಿ ಇಂತಹ ಜಾಗೃತಿ ಮೂಡುವ ಚಿತ್ರಗಳು ಯುವ ಸಮೂಹವನ್ನು ಎಚ್ಚರಿಸುವಲ್ಲಿ ಸಹಕಾರಿ, ಎಲ್ಲರೂ ಇಂತಹ ಪ್ರಯತ್ನವನ್ನು ಬೆಂಬಲಿಸಬೇಕು” ಎಂದು ಹೇಳಿದ ಸುಮಂತ್ ಅವರು, ತಾಕತ್ ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ತಾಕತ್ ಚಿತ್ರದ ಛಾಯಾಗ್ರಾಹಕ ಪ್ರಣಿತ್ ರಾಜ್, ಸಹ ಛಾಯಾಗ್ರಾಹಕ ಮನೋಜ್, ಧರ್ಮಸ್ಥಳದ ಚಂದನ್ ಕಾಮತ್, ಉಮೇಶ್ ಪ್ರಭು, ದೇವಾನಂದ್, ಕೃಷ್ಣ ಬೆಳ್ತಂಗಡಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here