ಅರಣ್ಯ ಪರಿಭಾವಿತ ಪ್ರದೇಶದಲ್ಲಿ 40-50 ವರ್ಷಗಳಿಂದ ವಾಸಿಸುತ್ತಿರುವವರಿಗೆ ಖಾಯಂ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಿ: ಗುರ್ಮೆ ಸುರೇಶ್ ಶೆಟ್ಟಿ ಆಗ್ರಹ

0
207

ಅರಣ್ಯ ಪರಿಭಾವಿತ (ಡಿಮ್ಡ್ ಫಾರೆಸ್ಟ್) ಪ್ರದೇಶದಲ್ಲಿ ತಜ್ಞರ ಸಮಿತಿಯು ರಾಜ್ಯದಲ್ಲಿ ಈ ಹಿಂದೆ ಅವೈಜ್ಞಾನಿಕ ಸರ್ವೆ ಮಾಡಿದ ಅರಣ್ಯ ಪರಿಭಾವಿತ ಪ್ರದೇಶವನ್ನು ಪುನರ್ ಸರ್ವೆ ಮಾಡಿ ಅದರಲ್ಲಿ ಉಡುಪಿ ಜಿಲ್ಲೆಯಲ್ಲಿ 10,769.02 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪ್ರದೇಶವೆಂದು ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆಯನ್ನು ಹೊರಡಿಸಿದ ಹೊರತಾದ ಪ್ರದೇಶದಲ್ಲಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ತುರ್ತಾಗಿ ಜಂಟಿ ಸಮೀಕ್ಷೆ ನಡೆಸಿ ಸುಮಾರು 40-50 ವರ್ಷಗಳಿಂದ ವಾಸ್ತವ್ಯದ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿರುವವರಿಗೆ ಖಾಯಂ ಹಕ್ಕು ಪತ್ರ ನೀಡುವಂತೆ ಹಾಗೂ ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸದನದಲ್ಲಿ ಪ್ರಸ್ತಾಪಿಸಿದರು.

LEAVE A REPLY

Please enter your comment!
Please enter your name here