ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ತಾಕೊಡೆ ಲ್ಯಾನ್ಸಿ ಮೆಂದಾ ಸನ್ಮಾನ

0
140

ಪ್ರಸ್ತುತ ಸಂಪಿಗೆ ನಿವಾಸಿ ತಾಕೊಡೆ ಲ್ಯಾನ್ಸಿ ಮೆಂದಾ ಅವರನ್ನು ನಿವೃತ್ತ ಸರಕಾರಿ ನೌಕರರ ಸಂಘದ ವತಿಯಿಂದ ರಾಷ್ಟ್ರ ಪ್ರಶಸ್ತಿ ವಿಜೇತ ಉತ್ತಮ ಶಿಕ್ಷಕ ಬೇಲಾಡಿ ವಿಠಲಶೆಟ್ಟಿ ಸನ್ಮಾನಿಸಿದರು. ಆಗಸ್ಟ್ 16 ರಂದು ಸಮಾಜ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ 1992ರಲ್ಲಿ ಸೇನೆಗೆ ಸೇರಿ ವಿವಿಧೆಡೆ ಕಾರ್ಯ ನಿರ್ವಹಿಸಿ, ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡಿದ್ದನ್ನು ಸ್ಮರಿಸಿಕೊಂಡರು, ಅವರನ್ನು ಪರಿಚಯಿಸಿದ ಅಂಡಾರು ಗುಣಪಾಲ ಜೈನ್ ಅವರು.
2026ರ ಏಪ್ರಿಲ್ 1ಕ್ಕೆ ಮೊದಲು ನಿವೃತ್ತ ಸರಕಾರಿ ನೌಕರರ ಪಿಂಚಣಿ ಹಾಗೂ ಕುಟುಂಬ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ಕೈಗೊಂಡ 8 ನೇ ಹಣಕಾಸು ಆಯೋಗದ ನಿರ್ಣಯ ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿಯನ್ನು ಕಳುಹಿಸಲಾಯಿತು.
ಸಂಘದ ಅಧ್ಯಕ್ಷ ತುಕಾರಾಂ ಕೆಂಬಾರೆ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಲತಾ ಸ್ವಾಗತಿಸಿದರು. ಕಾರ್ಯದರ್ಶಿ ಎಲ್ ಜೆ ಫೆರ್ನಾಂಡಿಸ್ ವಂದಿಸಿದರು.

ವರದಿ :ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here