ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಪುತ್ತೂರು ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ.
ಈ ತಂಡದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಅಗತ್ಯ ಡಿ., ಎನ್.ಆರ್.ವಿವೇಕ್ ಸುಬ್ಬಯ್ಯ, ಅಕ್ಷಣ್. ಎಚ್. ಎಮ್, ನಿಶಾಂತ್. ಕೆ , ಉಲ್ಲಾಸ್. ಡಿ.ಜಿ, ಮಾನಸ್. ಎಸ್.ಡಿ, ಎಚ್. ಎ ಚಿನ್ಮಯ್, ದರ್ಶನ್. ಎಚ್.ಕೆ, ಚಿರಾಗ್ ಹಾಗೂ ಪ್ರಥಮ ಪಿಯುಸಿಯ ಉಜ್ವಲ್ ಮನೋಜ್ ತಾರ, ನಿಹಾನ್ ಶೆಟ್ಟಿ ವಿ.ಆರ್, ಯೋಗೇಶ್. ಎನ್, ಪವನ್. ವಿ.ವಿ , ಗಗನ್. ಸಿ.ಎನ್, ಬಿ. ಜಿ ವಿಲಾಸ್ ಭಾಗವಹಿಸಿದರು. ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್‌ವಿ. ಎಸ್., ಡಾ. ಜ್ಯೋತಿ ಕುಮಾರಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ , ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.