ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ.ಸಿ ಟ್ರಸ್ಟ್ (ರಿ.) ತಣ್ಣೀರುಪಂತ ವಲಯ ಕರಾಯ ಗ್ರಾಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ತಣ್ಣೀರುಪಂತ , ಮಡಂತ್ಯಾರು,ಕಣಿಯೂರು ವಲಯದ 25 ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು ಸ್ವಚ್ಛತೆ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೆಸರರಾದ ಅನಂತ ಕೃಷ್ಣ ಕುದ್ದನ್ನಾಯ, ಶ್ರೀ ಕ್ಷೇತ್ರ ಮಂಜುನಾಥೇಶ್ವರ ಭಜನಾ ಪರಿಷತ್ ನ ತಾಲೂಕು ಅಧ್ಯಕ್ಷರಾದ ಜಗದೀಶ ಮೈರಾ, ವಲಯ ಮೇಲ್ವಿಚಾರಕರಾದ ವಿಶ್ವನಾಥ್ ಪೂಜಾರಿ, ವಲಯ ಅಧ್ಯಕ್ಷರಾದ ರಾಜಶೇಖರ್ ರೈ ,ಸೇವಾಪ್ರತಿನಿಧಿಯಾದ ಸಂಧ್ಯಾ ಮತ್ತು ಸುಜಾತ ಹಾಗೂ ಎಲ್ಲಾ ಸ್ವಯಂಸೇವಕರು ಉಪಸ್ಥಿತರಿದ್ದರು.

