ತನುಶ್ರೀ ಹತ್ತನೇ ವಿಶ್ವದಾಖಲೆ

0
154

ಉಡುಪಿ: ಬೆಹರಿನ್​ ಕನ್ನಡ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಬಾಲೆ ತನುಶ್ರೀ ಪಿತ್ರೋಡಿ ಐವತ್ತು ನಿಮಿಷದಲ್ಲಿ 333 ಆಸನಗಳನ್ನು ಮಾಡುವ ಮೂಲಕ ಹತ್ತನೇ ವಿಶ್ವದಾಖಲೆ ಮಾಡಿದ್ದಾರೆ.


ಈ ಹಿಂದೆ ಅದಮಾರು ಪರ್ಯಾಯ ಸಂದರ್ಭ 45 ನಿಮಿಷದಲ್ಲಿ 245 ಆಸನಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದರು. ಇದೀಗ ತನ್ನ ದಾಖಲೆಯನ್ನು ತಾನೇ ಮುರಿದು ಗೋಲ್ಡನ್​ ಬುಕ್​ ಆಫ್​ ರೆಕಾರ್ಡ್​ಗೆ ಸೇರ್ಪಡೆಯಾಗಿದ್ದಾರೆ.
ಬೆಹರಿನ್​ ಕನ್ನಡ ಸಂಘದ ಅಧ್ಯಕ್ಷ ಅಜಿತ್​ ಬಂಗೇರ, ಯೋಗ ಅಸೋಸಿಯೇಶನ್​ ಅಧ್ಯಕ್ಷೆ ಫಾತಿಮಾ ಅಲ್​ ಮನ್ಸೂರಿ , ಗೋಲ್ಡನ್​ ಬುಕ್​ ಆಫ್​ ರೆಕಾರ್ಡ್ಸ್​ನ ಮನೀಶ್​ ಬಿಷ್ಣೋಯಿ, ಇಂಡಿಯನ್​ ಸ್ಕೂಲ್​ ಅಧ್ಯಕ್ಷ ಬಿನು ಮನ್ನಿಲ್​ ವರ್ಗಿಸ್​ , ಕೇರಳೀಯ ಸಮಾಜಮ್​ ಅಧ್ಯಕ್ಷ ಪಿ.ವಿ ರಾಧಾಕೃಷ್ಣ ಪಿಳ್ಳೆ, ಇಂಡಿಯನ್​ ಕ್ಲಬ್​ ಅಧ್ಯಕ್ಷ ಜೊಸೆಫ್​ ಜಾಯ್​, ಯುನಿಕೋ ಗ್ರೂಪ್​ ಬೆಹರಿನ್​ ಸಿ ಇ ಒ ಜಯಶಂಕರ್​ ವಿಶ್ವನಾಥನ್​ , ಸಂಧ್ಯಾ ಉದಯ್​ ದಂಪತಿ, ರಾಘವೇಂದ್ರ ದೇವಾಡಿಗ, ರೀತು ಶ್ರೀ, ಕನ್ನಡ ಸಂಘದ ರಾಮ್​ ಪ್ರಸಾದ್​ ಅಮ್ಮೆನಡ್ಕ, ನಿತಿನ್​ ಶೆಟ್ಟಿ, ಈಶ್ವರ್​ ಅಂಚನ್​ , ಹರಿನಾಥ್​ ಸುವರ್ಣ , ಹರಿಣಿ ಶೆಟ್ಟಿ , ಪುಲಕೇಶಿ , ಹರೀಶ್​ ಗೌಡ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here