ದಾವಣಗೆರೆ: ತಾರಿವಾಳ ಗ್ಲೋಬಲ್ ಗೋಲ್ಡ್ ಸಂಸ್ಥೆಯು ಸೆ. 10ರಂದು ಬುಧವಾರ ದಾವಣಗೆರೆಯ ಎ.ವಿ.ಕೆ. ಕಾಲೇಜ್ ರಸ್ತೆಯಲ್ಲಿರುವ ಚೇತನಾ ಹೋಟೆಲ್ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಉದ್ಘಾಟನೆಯಾಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಶೋಭಾ ರೂಪೇಶ್ ತಿಳಿಸಿದ್ದಾರೆ.
ಹರಿಹರ-ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿಯವರು ಉದ್ಘಾಟನೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿಯ ತಾರಿವಾಳ ಗ್ಲೋಬಲ್ ಸಮೂಹದ ಸಂಸ್ಥಾಪಕರಾದ ಬಸವರಾಜ್ ಸಂಗಮೇಶ್ ತಾರಿವಾಳರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ ಮಹಾನಗರ ಪಾಲಿಕೆಯ ಸದಸ್ಯರಾದ ಎ.ನಾಗರಾಜ್. ನಗರ ಪಾಲಿಕೆಯ ಮಾಜಿ ವಿರೋಧ ಪಕ್ಷ ನಾಯಕರಾದ ಪ್ರಸನ್ನಕುಮಾರ್ ಕೆ. ಉಡುಪಿ ಜಿಲ್ಲೆಯ ಮಣಿಪಾಲದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ|| ಎಸ್.ಯು. ಶರೀಫ್, ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ರಾಜೇಶ್ ಸುವರ್ಣ ಪ್ರಕಟಿಸಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಸಮಿತಿ ಸದಸ್ಯರಾದ ಎಸ್.ರವೀಂದ್ರ ಆಚಾರ್ಯ ವಿನಂತಿಸಿದ್ದಾರೆ.