ಸಾಂದೀಪನಿ ಸಾಧನಾಶ್ರಮ, ಶ್ರೀಕ್ಷೇತ್ರ ಕೇಮಾರು ಇಲ್ಲಿಗೆ ಭೇಟಿ ನೀಡಿ ಪರಮಪೂಜ್ಯ ಶ್ರೀಶ್ರೀಶ್ರೀ ಈಶ ವಿಠಲದಾಸ ಸ್ವಾಮೀಜಿಯವರ ಮಾತ್ರಶ್ರೀ ನಿವ್ರತ್ತ ಶಿಕ್ಷಕಿ ಪ್ರೇಮ ಟೀ ಚರ್ ಇವರನ್ನು ಆಶ್ರಮದಲ್ಲಿ ಸನ್ಮಾನಿಸುವ ಸೌಭಾಗ್ಯ ನಮ್ಮದಾಯಿತು. ಅತ್ಯಂತ ಭಾವನಾತ್ಮಕವಾಗಿ ನಡೆದ ಈ ಪುಟ್ಟ ಸಮಾರಂಭದಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಪ್ರೇಮ ಟೀಚರ್’ರವರ ಸೇವೆಯನ್ನು ಕೊಂಡಾಡಿ ಶಾಲು, ಹಾರ, ಫಲ, ಪುಷ್ಪ ನೀಡಿ ಗೌರವವನ್ನು ಸಲ್ಲಿಸಲಾಯಿತು.
ಸ್ವಾಮೀಜಿಯವರು ನಮ್ಮೆಲ್ಲರಿಗೂ ಪ್ರೀತಿಯಿಂದ ಶಾಲು ಹೊದಿಸಿ ಆಶ್ರಮದುದ್ದಕ್ಕೂ ಕರೆದೊಯ್ದು ಆಶ್ರಮದ ಕಿರು ಪರಿಚಯವನ್ನು ಮಾಡಿಕೂಟ್ಟರು. ಅಲ್ಲಿಂದ ಸ್ವಾಮಿಜಿಯವರ ಮನೆಗೆ ತೆರಳಿದ ನಾವು ತಿಂಡಿ/ಪಾನಿಯ ಸೇವಿಸಿ ಸ್ವಲ ಹೊತ್ತು ಕಳೆದೆವು. ಆಶ್ರಮದ ಗೇಟಿನವರೆಗೂ ಬಂದು ನಮ್ಮನ್ನು ಬಿಳ್ಕೊಟ್ಟ ಸ್ವಾಮಿಜಿಯವರ ಸರಳತೆ, ಅವರ ಮಾತ್ರಶ್ರೀಯವರ ಪ್ರೀತಿ, ಆಶೀರ್ವಾದ ಬಹುಕಾಲ ನಮ್ಮ ಮನಸ್ಸಿನಲ್ಲಿ ಉಳಿಯಲಿದೆ.
ಅಧ್ಯಕ್ಷ ಲಯನ್ ಅಮಿತ್ ಡಿಸಿಲ್ವ, ಕಾರ್ಯದರ್ಶಿ ಲಯನ್ ರಿಚರ್ಡ್ ಡಿಸೋಜ, ಲಯನ್ ಫೆಲಿಕ್ಸ್ ಡಿಸೋಜ, ಲಯನ್ ಪ್ರೆಸಿಲ್ಲಾ ಟೀಚರ್, ಲಯನ್ ಮೆಲಿಟಾ ಬರ್ಬೊಜ, ಲಯನ್ ಲವಿಟಾ ಬರ್ಬೊಜ, ಲಯನ್ ವಿದ್ಯಾ ಮಸ್ಕರೇನ್ಹಸ್ ಹಾಗೂ ಸದಸ್ಯರ ಮಕ್ಕಳು ಜೊತೆಗಿದ್ದರು.

