ಶ್ರೀ ಜಚನಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ – ಶಿಕ್ಷಕರಿಗೆ ಸನ್ಮಾನ

0
40

ಬೆಂಗಳೂರು; ಚಿಕ್ಕಬಳ್ಳಾಪುರದ ಡಾ.ಶ್ರೀ ಜಚನಿ ಪ್ರಥಮ ದರ್ಜೆ ಕಾಲೇಜು. ಡಾ. ಶ್ರೀ ಸಿದ್ದರಾಮಯ್ಯ ಲಾ ಕಾಲೇಜು, ಡಾ. ಶ್ರೀ ಜಚನಿ ಪದವಿಪೂರ್ವ ಕಾಲೇಜುಗಳ ಸಹಯೋಗದೊಂದಿಗೆ ಸಿದ್ದರಾಮಯ್ಯ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶಿವಕುಮಾರ ರಂಗ ಪ್ರಯೋಗಶಾಲೆ ಸಾಣಿಹಳ್ಳಿ ಚಿತ್ರದುರ್ಗ ರಂಗನಿರ್ದೇಶಕರಾದ ನಟರಾಜ್ ಹೊನ್ನವಳ್ಳಿ, ಕಾಲೇಜಿನ ಆಡಳಿತಾಧಿಕಾರಿಗಳಾದ ಡಾ. ಶಿವಜ್ಯೋತಿ ಅವರು 15 ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಿದರು.

ಶ್ರೀಸಿದ್ದರಾಮಯ್ಯ ಲಾ ಕಾಲೇಜು ಪ್ರಾಂಶುಪಾಲರಾದ ವಕೀಲರಾದ ಎ.ಎಸ್ ರಮ್ಯಾ ವರ್ಷಿಣಿ, ಶ್ರೀಜಚನಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ಶ್ವೇತಾ, ಡಾ.ಶ್ರೀಜಚನಿ ಪಿ.ಯು.ಕಾಲೇಜು, ಪ್ರಾಂಶುಪಾಲರು ಪವನ್ ಕುಮಾರ್ ಭಾಗವಹಸಿದ್ದರು.

ಶಿಕ್ಷಕರು ಜಚನಿ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರುಗಳಾದ ಭರತ್- ಉಪನ್ಯಾಸಕರು ಲಾ- ಕಾಲೇಜು. ಪವನ್ ಕುಮಾರ್ ಪ್ರಾಂಶುಪಾಲರು- ಪಿ.ಯು.ಕಾಲೇಜು, ರಾಮಕೃಷ್ಣನ್ ಅಯ್ಯರ್ – ಹಿರಿಯ‌ ಉಪನ್ಯಾಸಕರು, ಅಕೌಂಟ್ಸ್, ಸುಮಲತಾ – FDA ಜಚನಿ ಕಾಲೇಜು, ಮಂಜುನಾಥ್ – ಕನ್ನಡ ಉಪನ್ಯಾಸಕರು, ಕವಿತಾ ಪೊಲಿಟಿಕಲ್ ಸೈನ್ಸ್ ಉಪನ್ಯಾಸಕರು, ಪ್ರಸನ್ನಕುಮಾರಿ ಉಪನ್ಯಾಸಕರು, ಡಾ. ಸುಕನ್ಯಾ – ಉಪನ್ಯಾಸಕರು, ಮಹಿಳಾ ಶಿಕ್ಷಣ, ಶಿಲ್ಪ.ಕೆ – ಉಪನ್ಯಾಸಕರು ಎಕನಾಮಿಕ್ಸ್, ರೇಷ್ಮಾ- ಉಪನ್ಯಾಸಕರು ಇತಿಹಾಸ. ಶ್ವೇತಾ ಉಪನ್ಯಾಸಕರು ಕಾಮರ್ಸ್ ವಿಭಾಗ, ವಿದ್ಯಾ ಉಪನ್ಯಾಸಕರು ಅವರನ್ನು ಸನ್ಮಾಸಲಾಯಿತು.

LEAVE A REPLY

Please enter your comment!
Please enter your name here