ಶಿಕ್ಷಕರು ಪ್ರಶಸ್ತಿ ವಿಜೇತರಾಗುವುದಕ್ಕಿಂತ ಪುರಸ್ಕೃತರಾಗಬೇಕು-ಉಮಾನಾಥ ಕೋಟ್ಯಾನ್

0
107

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಶಿಕ್ಷಕರು ಗೌರವದ ಸಂಕೇತ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮಹಾನ್ ವ್ಯಕ್ತಿ. ಸಮಾಜಕ್ಕೆ ಉತ್ತಮ ಪ್ರಜೆಯನ್ನು ರೂಪಿಸಿಕೊಡುವ ಮಹತ್ತರ ಕರ್ತವ್ಯ ಅವರ ಪಾಲಿನದ್ದು. ಆದುದರಿಂದಲೇ ಅವರನ್ನು ಪೂಜ್ಯ ಗುರುಗಳೆಂದು ಪೂಜಿಸುತ್ತಾರೆ. ಅಂತಹ ಶಿಕ್ಷಕರು ತಿಮ್ಮಕ್ಕ, ಹಾಜಬ್ಬರಂತೆ ಪುರಸ್ಕೃತಗೊಳ್ಳಬೇಕೆ ಹೊರತು ವಿಜೇತರಾಗುವಲ್ಲಿಗೇ ನಿಲ್ಲಬಾರದು ಎಂದು ಮೂಡುಬಿದಿರೆ ಮುಲ್ಕಿ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ನುಡಿದರು.
ಅವರು ಸೆಪ್ಟೆಂಬರ್ 5 ರಂದು ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ ದ.ಕ.ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರ ದಿನಾಚರಣೆಯನ್ನು ದೀಪ ಬೆಳಗಿ ಉದ್ಘಾಟಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ ಪುಂಡಿಕೈ ಗಣಪಯ್ಯ ಭಟ್ ತಮ್ಮ ದಿಕ್ಸೂಚಿ ಭಾಷಣದಲ್ಲಿ ದಿಕ್ಸೂಚಿ ಬೇಕಾಗಿರುವುದು ಶಿಕ್ಷಣದ ವ್ಯವಸ್ಥೆಗೆ. ಕ್ಷೀರ, ಸಾಮಾಜಿಕ, ಆರ್ಥಿಕ, ಕೃಷಿ, ಕೈಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಕ್ರಾಂತಿಯಾಗಿದ್ದರು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಕೇವಲ ಬದಲಾವಣೆ ಮಾತ್ರ ಆಗಿದೆ. ಶಿಕ್ಷಣದ ಗುರಿ ಅಂಕ ಪಡೆಯುವುದಲ್ಲ ಬದುಕಿನ ಸಾಮಾಜಿಕ ವಿಚಾರಗಳನ್ನು, ಸತ್ಯಗಳನ್ನು ತಿಳಿದು ಉತ್ತಮ ಶಿಕ್ಷಣವನ್ನು ಹೊಂದುವುದಾಗಿದೆ. ಉನ್ನತ ಶಿಕ್ಷಣದ ಆಯೋಗದ ಅಧ್ಯಕ್ಷರಾಗಿದ್ದುಕೊಂಡು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಉತ್ತಮ ಸಲಹೆಗಳಿಂದ ಉನ್ನತ ಶಿಕ್ಷಣ ಉತ್ತಮ ಸಾಧನೆಯನ್ನು ಮಾಡುತ್ತಿದೆ ಎಂದು ನೆನಪಿಸಿಕೊಂಡರು.
ಮಾಜಿ ಸಚಿವ ಅಭಯ್ ಚಂದ್ರ ಜೈನ್, ಕೆಎಂಎಫ್ ನ ನಿರ್ದೇಶಕ ಸುಚರಿತ ಶೆಟ್ಟಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕರುಗಳಾದ: ಪ್ರಾಥಮಿಕ ಶಾಲೆ:- ಪುಪಾಡಿಕಲ್ಲು ಸೋಫಿಯಾ ಪಿಂಟೋ, ಕೋಟೆ ಬಾಗಿಲು ಮೇಬಲ್ ಫೆರ್ನಾಂಡಿಸ್, ಇರುವೈಲು ಕುಶಲ ಸುವರ್ಣ, ನಿಜಾರು ನಾಗೇಶ್ ಎಸ್, ಪೆರಿಬೆಟ್ಟು ರಾಜೇಂದ್ರ ಕುಮಾರ್ ಜೈನ್, ಕಲ್ಲಬೆಟ್ಟು ಮಾರ್ಗರೇಟ್, ಪ್ರೌಢಶಾಲಾ:-ನೆಲ್ಲಿಕಾರು ಶಕುಂತಲಾ, ಹೊಸಬೆಟ್ಟು ದೇವನಾಥ್ ಸುವರ್ಣ, ಮೂಡುಬಿದಿರೆ ಬಿ ಆರ್ ಪಿ ಯ ಕ್ಲೆಮೆಂಟ್ ಡಿಸೋಜ, ಶಂಕರ್ ಭಟ್, ಬೋಧಕೇತರ ಸಿಬ್ಬಂದಿಗಳಾದ ಮೇಬಲ್ ಸಿಂತಿಯ ಮೆಂಡೊನ್ಸ, ಪವಿತ್ರ ಎಂ ಪೈ, ಅವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ನಾಗೇಶ್ ಹಾಗೂ ಶಂಕರ್ ಭಟ್ ಮಾತನಾಡಿದರು.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನೀರ್ಕೆರೆ ಯಮುನಾ ಕೆ, ರೋಟರಿ ಗಜಾನನ ಮರಾಠೆ, ಡಿಜೆ ಯ ಶಶಿಕಾಂತ್ ವೈ, ಆಳ್ವಾಸ್ನ ಪ್ರಶಾಂತ್ ಭಟ್ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅಳಿಯೂರು ವಿದ್ಯಾಸಂದೀಪ ನಾಯಕ್, ಕೋಟೆ ಬಾಗಿಲು ಮೇಬಲ್ ಫೆರ್ನಾಂಡಿಸ್, ಮೂಡು ಕೊಣಾಜೆ ಐಡಾ ಪಿರೇರ ಅವರುಗಳನ್ನು ಸನ್ಮಾನಿಸಲಾಯಿತು.
ಈ ವರ್ಷದಿಂದ ರಕಾರದ ನಿಯಮದಂತೆ ಪ್ರಾರಂಭವಾದ ಅತ್ಯುತ್ತಮ ಶಾಲಾ ಅಭಿವೃದ್ಧಿ ಪ್ರಶಸ್ತಿ ನೀರಿಕೆರೆ ಶಾಲೆಯ ಆಡಳಿತ ಮಂಡಳಿಗೆ ಸಂದಿತು.
625ರಲ್ಲಿ 625 ಅಂಕಗಳನ್ನು ಪಡೆದ ನಾರಾವಿ ಸಾನಿಧ್ಯ ರಾವ್ ಅವರನ್ನು ಸಂಭ್ರಮದಿಂದ ಸನ್ಮಾನಿಸಲಾಯಿತು.
ಕ್ರೀಡೆ, ಸಂಸ್ಕೃತಿಕ, ಸಹಪಠ್ಯ ಚಟುವಟಿಕೆಗಳಲ್ಲಿ ವಿಜೇತರಾದ ಶಿಕ್ಷಕರನ್ನು ಗೌರವಿಸಲಾಯಿತು. ನೂರು ಶೇಕಡ ಫಲಿತಾಂಶವನ್ನು ಪಡೆದ ಶಾಲೆಗಳಿಗೂ ಗೌರವವನ್ನು ಸಲ್ಲಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿದ ಎಲ್ಲರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ರಾಜಕಾರದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಉದ್ಯಮಿ ಕೆ ಶ್ರೀಪತಿ ಭಟ್, ಮಂಗಳೂರು ಡಯಟ್ ನ ಶ್ರೀನಿವಾಸ್ ಆಡಿಗ, ಪ್ರಾಂಶುಪಾಲ ಚಂದ್ರು, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ರಾಜಶ್ರೀ, ದೊರೆಸ್ವಾಮಿ, ಸುಧಾಕರ ಸಾಲಿಯಾನ್, ಶಿವಾನಂದ ಕಾಯ್ಕಿಣಿ, ಜಾರ್ಜ್ ಬರ್ನಾಡ್, ಸೀಮಾ ನಾಯಕ್ ಹಾಜರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಎಸ್ ವಿರೂಪಾಕ್ಷಪ್ಪ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ರಾಮಕೃಷ್ಣ ಶಿರೂರು ವರದಿ ವಾಚಿಸಿದರು. ನವೀನ್ ಅಂಬೂರಿ, ರಾಜೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಬಿ ಆರ್ ಸಿ ಯ ಸೌಮ್ಯ ವಂದಿಸಿದರು.

LEAVE A REPLY

Please enter your comment!
Please enter your name here