ಪ್ರಸ್ತುತ ದಿನಗಳಲ್ಲಿ ಯುವ ಜನತೆ ಮೋಜು ಮಸ್ತಿ,ಮೊಬೈಲ್ ಗಳ ದಾಸರಾಗುವ ಸಮಯದಲ್ಲಿ ಮುವತ್ತರ ಒಳಗಿನ ಯುವಕ,ಯುವತಿಯ ಶಾಲಾ, ಕಾಲೇಜು,ಉದ್ಯೋಗಿಗಳು ಸೇರಿ ನನ್ನೂರು ಮಾದರಿ ಊರಾಗಿಸಬೇಕೆಂದು ಅನೇಕ ಕನಸುಗಳನ್ನು ಕಟ್ಟಿಕೊಂಡು ಟೀಮ್ ಮೆಟ್ಟಿನಹೊಳೆ ಎಂಬ ಹೆಸರಿನಲ್ಲಿ ಊರಿನವರ ಸಹಕಾರದಲ್ಲಿ ಒಂದಾಗಿದ್ದಾರೆ.
ತರುಣ ,ತರುಣಿಯರ ಮೊದಲ ಹೆಜ್ಜೆಯಾಗಿ ವಿಭಿನ್ನ ವಿನೂತನ ರೀತಿಯಲ್ಲಿ ಸ್ವಚ್ಚತೆ,ಮನೋರಂಜನಾ ಆಟ ಹಾಗೂ ಆಟದೊಂದಿಗೆ ಯುವ ಜನತೆಗೆ ಸಂದೇಶ ನೀಡುತ್ತಾ ಬಂದಿರುತ್ತಾರೆ.
ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿ
ಕ್ಲೀನ್ ವಿಲೇಜ್
ಎಂಬ ಹೆಸರಿನಲ್ಲಿ ಊರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಮೆಟ್ಟಿನಹೊಳೆಯ ಯುವ ತರುಣ ತರುಣಿಯರು ಸ್ವಚ್ಚತಾ ಅಭಿಯಾನ ನಡೆಸಿದರು.
ಸ್ವಚ್ಛಥಾನ್ ಮ್ಯಾರಥಾನ್ 5k
ಎನ್ನುವ ಶೀರ್ಷಿಕೆಯಡಿಯಲ್ಲಿ ಸ್ವಚ್ಛಥಾನ್ ಮ್ಯಾರಥಾನ್ ೫ಕೆ ಕಾರ್ಯಕ್ರಮವನ್ನು ಕೈಗೊಂಡಿದ್ದರು. ಬೆಳಿಗ್ಗೆ 7 ಗಂಟೆ ಯಿಂದ ಸರಕಾರಿ ಪ್ರೌಢಶಾಲೆ ಮೆಟ್ಟಿನಹೊಳೆ ಯಿಂದ ಶುರುವಾಗಿ ಜೆ.ಎನ್.ಎಸ್ ಕಾಂಪ್ಲೆಕ್ಸ್ ಹೇರೆಂಜಾಲು ಮತ್ತು ಕಾಲ್ತೋಡು ಮಾರ್ಗವಾಗಿ ಕ್ರಮಿಸಿ, ಸರಕಾರಿ ಪ್ರೌಢಶಾಲೆ ಮೆಟ್ಟಿನಹೊಳೆಯಲ್ಲಿ 5k ಮ್ಯಾರಥಾನ್ ಮುಗಿಸಿದರು. ನಂತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೆಡಲ್, ಸರ್ಟಿಫಿಕೇಟ್, ನಗದು ಹಣ ನೀಡಿ ಗೌರವಿಸಿದರು. ಹಾಗೆ ಟಾಪ್ 10 ಬಂದ ಕ್ರೀಡಾಳುಗಳಿಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಿದರು.
ಯುವ ಮನಸ್ಸುಗಳಿಗೆ ಫನ್ನಿ ಗೇಮ್ಸ್
ಯುವಕರು, ಯುವತಿಯರು ಹಾಗೂ ಮಕ್ಕಳಿಗೆ funny games, ಊರ ಸ್ವಚ್ಛತೆ ಕಾರ್ಯಕ್ರಮ, ಹಾಗೂ ಒಗಟಿನ ಮೂಲಕ ಸುಳಿವು ಬಳಸಿಕೊಂಡು ನಿಧಿ ಶೋಧ(Treasure hunt ) ಎಂಬ ಹೊಸ ಪ್ರಯತ್ನದೊಂದಿಗೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

