ಸ್ಮಾರ್ಟ್ ಸಿಟಿ ದಾವಣಗೆರೆ ನಗರದಲ್ಲಿ ಅತಿ ದೊಡ್ಡ ಮತ್ತು ನಗರದ ಮಧ್ಯಭಾಗದಲ್ಲಿ ಇರುವ ಕಾಸಲ್ ಶ್ರೀನಿವಾಸ ಶೆಟ್ಟಿ ಪಾರ್ಕ್(ವಾಟರ್ ಟ್ಯಾಂಕ್ ಪಾರ್ಕ್) ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಪಾದಚಾರಿಗಳ ವಾಕಿಂಗ್ ಪಾತ್ ಅಭಿವೃದ್ಧಿ ಕಾಮಗಾರಿಯಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿವೆ.
ಕಾಮಗಾರಿಯಲ್ಲಿ ನಿಯಮಾನುಸಾರ ಕಾಂಕ್ರಿಟ್ ಅಡಿಪಾಯವಿಲ್ಲದೆ ಹಾಗೂ ಪಕ್ಕದಲ್ಲಿ ಕಾಂಕ್ರಿಟ್ ಬೆಂಬಲ ( ಬಲ ) ನೀಡದೇ, ಎರಡೂ ಬದಿಯಲ್ಲಿ ಕರ್ಬ್ಗಳನ್ನು ನೇರವಾಗಿ ಮಣ್ಣಿನ ಮೇಲೆಯೇ ಅಳವಡಿಸಿರುವುದರಿಂದ ಮತ್ತು ಕರೆ(ಎರೆ)ಮಣ್ಣು ಇರುವುದರಿಂದ ಒಳಭಾಗದಲ್ಲಿ ಪೇವರ್ಸ್ ಈಗಲೇ ಬಿರುಕುಬಿಟ್ಟು ಕುಸಿಯುತ್ತಾ ನಿರಂತರವಾಗಿ ಮುಂದುವರೆಯುತ್ತಾ ಹೋಗಿರುವುದು ಸಾರ್ವಜನಿಕರ ಗಮನಕ್ಕೆ ಕಾಣುತ್ತಿದೆ.
ಸಾಮಾನ್ಯವಾಗಿ ವಾಕಿಂಗ್ ಪಾತ್ ನಿರ್ಮಾಣದ ವೇಳೆ ಕರ್ಬ್ಗಳನ್ನು ಅಳವಡಿಸುವ ಮೊದಲು ಗಟ್ಟಿಯಾದ ಭದ್ರವಾದ ಕಾಂಕ್ರಿಟ್ ಅಡಿಪಾಯ ಮತ್ತು ಮೋರ್ಟಾರ್ ಹಾಸು ನೀಡುವುದು ಕಡ್ಡಾಯವಾಗಿದೆ. ಇದರಿಂದ ಕರ್ಬ್ಗಳು ಗಟ್ಟಿಯಾಗಿ ನಿಂತು ದೀರ್ಘಕಾಲ ಬಾಳಿಕೆ ಬರುತ್ತವೆ. ಆದರೆ ಇಲ್ಲಿ ಈ ತಾಂತ್ರಿಕ ಕ್ರಮಗಳನ್ನು ಪಾಲಿಸದೇ ಗುಣಮಟ್ಟವಿಲ್ಲದ ಕಾಮಗಾರಿ ಮುಕ್ತಾಯ ಅಂತ ತಲುಪುತ್ತಿದೆ.
ತಾಂತ್ರಿಕ ಪರಿಣಿತರ ಪ್ರಕಾರ, ಅಡಿಪಾಯವಿಲ್ಲದೆ ಮಣ್ಣಿನ ಮೇಲೆ ಅಳವಡಿಸಿದ ಕರ್ಬ್ಗಳು ಮಳೆಗಾಲದಲ್ಲಿ ಭಾರದಿಂದ ಸಡಿಲವಾಗಿ ಕುಸಿದು ಜಾರಿ ಸರಿದು ಬಿದ್ದೇ ಬೀಳುತ್ತದೆ. ಇನ್ನು ಮಳೆಗಾಲವಿಲ್ಲದೇ ಈಗಲೇ ಬಿರುಕು ಬಿಟ್ಟಿದೆ.
ಇನ್ನು ಮಳೆಗಾಲ ಪ್ರಾರಂಭವಾದಲ್ಲಿ ಬಿರುಕು ಬಿಡುವುದು, ಕುಸಿಯುವುದು ಖಚಿತ. ಕೆಲವೇ ದಿನಗಳಲ್ಲಿ ಪಾದಚಾರಿಗಳ ಪಥ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಹಣ ವ್ಯರ್ಥವಾಗುತ್ತದೆ ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್‌ಗಳು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ, ಸರಿಪಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಮನವಿ.
ವರದಿ : ಮಂಜುನಾಥ ಸ್ವಾಮಿ ಹೆಚ್.ವಿ. ಮತ್ತು ವಾಕಿಂಗ್ ಬಳಗ, ದಾವಣಗೆರೆ

