ಪಡುಬಿದಿರೆ: ಟೆಂಪೋವೊಂದರ ಟಯರ್ ಸ್ಪೋಟಗೊಂಡು ಮಗುಚಿ ಬಿದ್ದು ಓರ್ವ ಮಹಿಳೆ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ಇಂದು(ಡಿ11) ಬೆಳಗ್ಗೆ ನಡೆದಿದೆ.ಪಾರ್ವತಿ(30) ಮೃತಪಟ್ಟ ಮಹಿಳೆ. ಸಾವಿತ್ರಮ್ಮ, ಮಹಂತೇಶ್ ಸೇರಿ 7 ಜನರು ಗಾಯಗೊಂಡಿದ್ದಾರೆ. ಮೂಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮತ್ತು ಪರಿಕರಗಳ ಸಹಿತ ಪುರುಷರು ಮತ್ತು ಮಹಿಳೆಯರು ಇದ್ದರು. ವೇಗವಾಗಿ ಸಾಗುತ್ತಿದ್ದ ಟೆಂಪೋವಿನ ಟಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಸ್ಥಳಕ್ಕೆ ತಕ್ಷಣ ಬಂದ ಸ್ಥಳೀಯರು ಟೆಂಪೋದ ಅಡಿಯಲ್ಲಿ ಸಿಲುಕಿಕೊಂಡ ಹಲವರನ್ನು ಹೊರತೆಗೆಯಲು ಸಹಾಯ ಮಾಡಿದರು. ಯಂತ್ರದ ಅಡಿಗೆ ಸಿಲುಕಿದ್ದ ಮಹಿಳೆಯನ್ನು ಕ್ರೇನ್‌ನ ಸಹಾಯದಿಂದ ಹೊರತೆಗೆಯಲಾಯಿತು.ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಡುಬಿದ್ರೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ

