ಮೂಡುಬಿದಿದೆ ತುಳುಕೂಟ, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್, ತ್ರಿಭುವನ್ ಜೆಸಿಐ, ಸೀನಿಯರ್ ಚೇಂಬರ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್, ತಾಕೊಡೆ ಅಭಿಮಾನಿ ಬಳಗ, ರಿಕ್ಷಾ ಚಾಲಕ ಮಾಲಕರು ಗಳ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 22 ರಂದು ಸಮಾಜ ಮಂದಿರದಲ್ಲಿ ರೇಮಂಡ್ ಡಿ ಕುನ್ಹಾ ರ ಬೊಳ್ಳಿಲು ತುಳು ಪುಸ್ತಕ ಬಿಡುಗಡೆಗೊಂಡಿತು. ಹುಟ್ಟೂರ ಸನ್ಮಾನವು ನಡೆಯಿತು.

ಈ ಸಂದರ್ಭದಲ್ಲಿ ಪ್ರಾರಂಭದಲ್ಲಿ ಉದಯೋನ್ಮುಖ ಚುಟುಕು ಕವಿಗಳ ಕವಿಘೋಷ್ಠಿ ಜರುಗಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವೇಕ್ ಆಳ್ವಾ ಪುಸ್ತಕವನ್ನು ಬಿಡುಗಡೆ ಗೊಳಿಸಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದ ರೇಮಂಡ್ ಅವರಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ವಿವಿಧ ಸಂಘಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಜರಿದ್ದರು. ಸದಾನಂದ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು.

