ವರದಿ:- ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ
ದವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ತುಳುವ ಮಹಾಸಭೆ ಮೂಡುಬಿದಿರೆ ಮಂದಾರ ಪ್ರತಿಷ್ಠಾನ ಮಂಗಳೂರು ತುಳುಕೂಟ ಬೆದ್ರ ಇವರ ಸಂಯುಕ್ತ ಆಶ್ರಯದಲ್ಲಿ ತುಳು ಕಾವ್ಯ ಯಾನ-28 ತುಳು ವಾಲ್ಮೀಕಿ ಮಂದಾರ ಕೇಶವ ಭಟ್ ರಚಿಸಿದ ಬೀರದ ಬೊಲ್ಪು ಕೃಷ್ಣನ ಬಾಲ್ಯ ಲೀಲೆಯ ಕುರಿತ ಸುಗಿಪು -ದುನಿಪು ಕಾರ್ಯಕ್ರಮವನ್ನು ಅಗಸ್ಟ್-24 ರಂದು ಸಂಜೆ 3 ಗಂಟೆಗೆ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇಲ್ಲಿ ಆಯೋಜಿಸಲಾಗಿದೆ ಎಂದು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೀರದ ಬೊಲ್ಪು ಕಾವ್ಯಯಾನದ ಪ್ರಸ್ತುತಿಯನ್ನು ದುನಿಪು : ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಸುಗಿಪು : ಪ್ರಶಾಂತ ರೈ ಪುತ್ತೂರು ರಚನಾ ಚಿತ್ತಲ್ , ಮದ್ದಳೆ :ಎಂ. ದೇವಾನಂದ ಭಟ್ ಬೆಳುವಾಯಿ ನಡೆಸಿಕೊಡಲಿದ್ದು
ಕಾರ್ಯಕ್ರಮಕ್ಕೆ ಡಾ. ರಾಜೇಶ್ ಭಟ್ ಮಂದಾರ ಪ್ರತಿಷ್ಠಾನ ಮಂಗಳೂರು ಪರವಾಗಿ ಸಹಕಾರ ನೀಡಲಿದ್ದಾರೆ. ತುಳುವರ್ಲ್ಡ್ ಫೌಂಡೇಶನ್ ಕಟೀಲ್ ಇದರ ಡಾ ರಾಜೇಶ ಆಳ್ವರ ಸಂಯೋಜನೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ದೀಪ ಬೆಳಗಿಸಿ ಆಶೀರ್ವಚನ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಧನಕೀರ್ತಿ ಬಲಿಪ, ಅಧ್ಯಕ್ಷರು ತುಳುಕೂಟ ಬೆದ್ರ,ಚಂದ್ರಹಾಸ ದೇವಾಡಿಗ, ಸ್ಥಾಪಕ ಅಧ್ಯಕ್ಷರು ತುಳುಕೂಟ ಬೆದ್ರ ಶಾರದಾಮಣಿ ಮಂದಾರ, ಮಂದಾರರ ಮಗಳು ಜಯಂತಿ ಎಸ್. ಬಂಗೇರ, ಸಂಚಾಲಕಿ ತುಳುವ ಮಹಾಸಭೆ ಮೂಡುಬಿದಿರೆ ಇವರೆಲ್ಲರ ಉಪಸ್ಥಿತಿ ಇರಲಿದೆ.
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ತುಳುವ ಮಹಾಸಭೆ ಮುಖ್ಯ ಸಂಚಾಲಕ, ಕನ್ನಡ ಸೇವಾ ರತ್ನ ಪ್ರಮೋದ್ ಸಪ್ರೆ – 9900449960 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಆಮಂತ್ರಣ ಪತ್ರದ ಪ್ರಕಟಣೆಯಲ್ಲಿ ನಮ್ಮ ವರದಿಗಾರರಿಗೆ ತಿಳಿಸಿದ್ದಾರೆ.