ಮಂಗಳೂರು: ಅಸ್ಟ್ರಾ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಿಸಲಾಗಿರುವ ಲಂಚುಲಾಲ್ ಕೆ.ಎಸ್. ಅರ್ಪಿಸಿರುವ ಕಮರ್ಷಿಯಲ್ ನೆತ್ತರೆಕೆರೆ ತುಳು-ಕನ್ನಡ ಚಿತ್ರವು ಆ. 22ರಂದು ಬಿಡುಡೆಗೊಳ್ಳಲಿದೆ.
ಸ್ವರಾಜ್ ಶೆಟ್ಟಿ ಅವರು ಚಿತ್ರವನ್ನು ರಚಿಸಿ ಮತ್ತು ನಿರ್ದೇಶನ ಮಾಡಿದ್ದು, ಲಂಚುಲಾಲ್ ಕೆ.ಎಸ್. ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಛಾಯಾಗ್ರಹಣ ಉದಯ ಬಲ್ಲಾಲ್ ಹಾಗೂ ವಿನೋದ್‌ರಾಜ್ ಕೋಖಿಲ ಸಂಗೀತ ನೀಡಿದ್ದಾರೆ. ಗಣೇಶ್ ನೀರ್ಚಾಲು ಎಡಿಟರ್ ಆಗಿದ್ದು, ಕಾರ್ತಿಕ್ ಮುಲ್ಕಿ ಸಹಕಾರ ನೀಡಿದ್ದಾರೆ. ಸಾಹಸ ಮಾಸ್ ಮಾದ, ಟೈಗರ್ ಶಿವ ಹಾಗೂ ಕಾರ್ಯನಿರ್ವಹಕ ನಿರ್ಮಾಪಕರಾಗಿ ಯತೀಶ್ ಪೂಜಾರಿ ಸಹಕರಿಸಿದ್ದಾರೆ. ಚಿತ್ರದ ನಿರ್ಮಾಣ ವ್ಯವಸ್ಥಾಪಕರಾಗಿ ವಿಜಯ್ ಮಯ್ಯ ಮತ್ತು ರಾಜೇಶ್ ಕುಡ್ಲ ದುಡಿದಿದ್ದಾರೆ. ಚಿತ್ರದ ನಿರ್ದೇಶನದಲ್ಲಿ ಅವಿನಾಶ್ ಎಸ್., ನೀತ್ ಪೂಜಾರಿ, ಕಾರ್ತಿಕ್ ಜಯಚಂದ್ರನ್, ತುಳುಸಿದಾಸ್ ಮಂಜೇಶ್ವರ, ಜಗನ್ನಾಥ ಶೆಟ್ಟಿ ಬಾಳ ಸಹಕಾರ ನೀಡಿದ್ದಾರೆ. ಮೇಕಪ್ ಚೇತನ್ ವಿಪಿನ್ ಆರ್ಟ್, ಪ್ರಚಾರಕಲೆ ದೇವಿ, ಸುಪ್ರೀತ್ ಬಿ.ಕೆ., ವಿನ್ಯಾಸ ನವೀನ್ ರೈ, ಕಟ್ಟಿಂಗ್ ಮೀಡಿಯಾ ಸಹಕಾರ ನೀಡಿದ್ದಾರೆ.