ಬೆಂಗಳೂರು: ಜೈ ತುಳುನಾಡು ಬೆಂಗಳೂರು, ತುಳುವ ನೇಸರೆ ಎಸ್.ಆರ್. ಬಂಡಿಮಾರ್ ಚಾವಡಿ ತುಲುನಾಡ ಆಟಿ-2025 ಕಾರ್ಯಕ್ರಮವು ಆ. 3ರಂದು ಬೆಂಗಳೂರು ವಿಜಯ ಬ್ಯಾಂಕ್ ಲೇಔಟ್ ಬಿಳೇಕಹಳ್ಳಿ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 7ರಿಂದ ಆಟೋಟಗಳು ಆರಂಭಗೊಳ್ಳಲಿದ್ದು, ದಿಬ್ಬಣ, ತುಳುಭಜನೆ, ಚೆಂಡೆ, ಚಾವಡಿ ಲೇಸ್, ಆಟಿಕಲೆಂಜ ನಲಿಕೆ, ತೆಲಿಕೆ ನಲಿಕೆ, ಪದರಂಗಿತ, ತುಳುಆಟ, ಸನ್ಮಾನ, ಬಹುಮಾನ ವಿತರಣೆ ನಡೆಯಲಿದೆ. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಹಾಗೂ ಮಕ್ಕಳಿಗೆ ಇನ್ನಿತ್ತರ ಆಟೋಟಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9535945809, 99899211493 ಸಂಪರ್ಕಿಸಬಹುದು.