ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ ಉಡುಪಿ 18-ಜುಲೈ,2025 ಶುಕ್ರವಾರ ಅಪರಾಹ್ನ 3.00 ಗಂಟೆ ಗೆ ತನ್ನ 8ನೇ ವರ್ಷದ ಕಾರ್ಯಕ್ರಮವನ್ನು ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಶ್ರೀ ಜೈನ ಮಠ ಮೂಡುಬಿದಿರೆ ಇದರ ಜಂಟಿ ಆಯೋಜನೆಯಲ್ಲಿ – ಸ್ವಸ್ತಿಶ್ರೀ ಭಟ್ಟಾರಕ ಭವನ ಜೈನ ಮಠ ಮೂಡುಬಿದಿರೆಯಲ್ಲಿ ಇಂದು ಶುಭಾರಂಭಗೊಂಡಿತು.
ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿ ದ ಸ್ವಾಮೀಜಿ
ಅರಸ ಬೊಪ್ಪಣ್ಣ ನಾಯಕ ಮತ್ತು ಸಿರಿದೇವಿ ಪತ್ನಿ ಜೊತೆಯಾಗಿ ಹಲವಾರು ಮರಗಿಡಗಳನ್ನು ನೆಡಿಸಿ ದಾನ ನೀಡಿದ ಅಪರೂಪದ ವಿಷಯ ಜಿನಶಾಸನದಲ್ಲಿ ತಿಳಿಸಿದೆ. ೧೨ನೇ ಶತಮಾನದ ಶಾಸನೋಕ್ತ ಮರ-ಗಿಡಗಳನ್ನು ಬೆಳೆಸುವ ವೃತವಾಗಿ ಸ್ವೀಕರಿಸಿದ ಕ್ಷಿತಿರುಹ ನೋಂಪಿ ಶಾಸನ ಅತಿ ಮುಖ್ಯವಾದುದಾಗಿದೆ. ಸ್ಥಳ ಕರ್ನಾಟಕ ವಿಜಯಪುರ ಜಿಲ್ಲೆ, ಇಂಡಿ ತಾಲ್ಲೂಕ, ಹಿರೇಬೇವಿನೂರು (ಪ್ರಸ್ತುತ ಬೇವಿನಹಳ್ಳಿ, ಖೇಡ್-ಗ್ರಾಮ) ಸಿದ್ಧರಾಮೇಶ್ವರ ಗುಡಿ ಬಳಿಯಿರುವ ಕಲ್ಲಿನ ಬರಹ /ಶಾಸನ ಕ್ರಿ.ಶ. 1190 ಜುಲೈ 18ರಲ್ಲಿ ಶಾಸನ ಬರೆಯಲಾಗಿದೆ. ‘ಕ್ಷಿತಿರೂಹನೋಂಪಿ’ ಶಾಸನ ನೆನಪಿನ ಲ್ಲಿ ಅಳಿವಿನ ಅಂಚಿ ನಲ್ಲಿರುವ ಶ್ರೀ ತಾಳೆ ಬೀಜ ಬಿತ್ತಿ ಸಸ್ಯ ಬೆಳೆವ ಅಭಿಯಾನ ಕೃಷ್ಣ ಯ್ಯ ಮಾಡು ತ್ತಿರುದು ಸಂತೋಷ ಎಂದು ಪ್ರಾಚ್ಯ ಸಂಶೋಧನಾ ಕೇಂದ್ರ ಧವಳತ್ರಯ ಟ್ರಸ್ಟ್ ಕಾರ್ಯ ವನ್ನು ಶ್ಲಾ ಘಿ ಸಿದರು ಬಳಿಕ
ಕಾಯಕ ಯೋಗಿ ಶ್ರೀ ಅಶೋಕ ದೊಮ್ಮಲೂರು -ಬೆಂಗಳೂರು ನಿರಪೇಕ್ಷಿತ ಸಾಧಕ ಕಡತ-ಹಸ್ತಪ್ರತಿಗಳ ಸಂರಕ್ಷಕ ಪ್ರಥಮ ‘ಪ್ರಾಚ್ಯಶ್ರೀರತ್ನ’ ಪ್ರಶಸ್ತಿ ಫಲಕ ಶಾಲು ಹಾರ ಸ್ಮರಣಿಕೆ ಶ್ರೀ ಫಲ ರೂ ಹತ್ತು ಸಾವಿರ ನಗದು ನೀಡಿ ಹರಸಿ ಆಶೀರ್ವಾದ ನೀಡಿದರು. ಹಾಗೂ -ಅಹ್ಮದಾಬಾದ್ ಮಹಾಜನ್ ಸಂಸ್ಥೆಯ ಪ್ರತಿನಿಧಿ ಜಿತೇಂದ್ರ ಜೈನ್ ಅವರಿಗೆ 200 ಶ್ರೀತಾಳೆ ಸಸಿ ಸಮರ್ಪಣೆ ಮಾಡಲಾಯಿತು.
ಶ್ರೀ ಕೃಷ್ಣ ಯ್ಯ ರವರಿಂದ ಜಗದಗಲ ಹಸಿರು ಹೊನ್ನು ಬಿತ್ತೋಣ ಎಂದು ತಿಳಿಸಿ ದರು ಸನ್ಮಾನಿತ ಅಶೋಕ್ ಪ್ರಾಚೀನ ತಾಡಾ ಓಲೆ ಸ್ಕ್ಯಾನಿಂಗ್ ಮಾಡುವ ಕೆಲಸ ಖುಷಿ ನೀಡಿದೆ ಎಂದರು ಸನ್ಮಾನ ಕ್ಕೆ ಕೃತಜ್ಞತೆ ವ್ಯೆಕ್ತ ಪಡಿಸಿದರು.ಸ್ವಾಮೀಜಿ ಯವರಿಂದ ಧವಳತ್ರಯ ಜೈನ್ ಕಾಶಿ ಟ್ರಸ್ಟ್ ವತಿಯಿಂದ ಸನ್ಮಾನಿತ ರನ್ನು ಅತಿಥಿ ಗಳಾದ ವೆಂಕಟೇಶ್, ಪ್ರಶಾಂತ್ ಕಾಮತ್, ನಿರಂಜನ್ ರನ್ನು. ಶ್ರೀ ಫಲ ಹಾರ ನೀಡಿ ಗೌರವಿಸಲಾಯಿತು
ಎಸ್.ಎ.ಕೃಷ್ಣಯ್ಯ ಮಾತನಾಡಿ ಕ್ಷಿತಿರುಹ ನೋಂಪಿ ಶಾಸನ ಹಾಕಿಸಿದ ಜೈನ ಮಹಿಳೆ ಸಿರಿದೇವಿ. ಹೀಗಾಗಿ ‘ಒಪ್ಪಿಕೊ ಪಚ್ಚೆವನಸಿರಿ ಅಭಿಯಾನ’ ಆರಂಭ ಮಾಡಿ ತಾಳೆ ವ್ರಕ್ಷ ಬೀಜ ಹಾಗೂ ಗಿಡ ಹಂಚುವ ಕಾರ್ಯ ನಿರಂತರ ನಡೆಯುತ್ತಿದೆ ಎಂದರು.
ಸುಜಾತಾ ಉಪನ್ಯಾಸಕರುಧನ್ಯವಾದ ಇತ್ತರು. ಕಾರ್ಯಕ್ರಮ ನಿರೂಪಣೆ ಯನ್ನು ಸ್ವಸ್ತಿಶ್ರೀ ಜೈನ್ ವಸತಿ ಪ.ಪೂ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಸೌಮ್ಯ ಶ್ರೀ ನೆರವೇರಿಸಿದರು.