ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 10, 2025 ರಂದು ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಘಟಕದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 9:30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಲಬಾರ್ ಗೋಲ್ಡ್‌ನ ಆಫೀಜ್ ಮತ್ತು ವಿಜಯ್ ಮಯಡಿ ಅವರು, ಶರತ್ ರಾಜ್ ಆರೂರು ನಿರ್ದೇಶನದ ‘ತುಳುನಾಡ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆ
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ರಘುಪತಿ ಭಟ್ ಮತ್ತು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಮೂರ್ತಿ ಬನ್ನಂಜೆ ಕೇಶವ ಶಾಂತಿ ಅವರು ತುಳುನಾಡ ಸಂಸ್ಕೃತಿಯ ಪ್ರತೀಕವಾದ ಬತ್ತದ ಕಳಸೆಯಿಂದ ತೆಂಗಿನ ಕೊಂಬು ಬಿಡಿಸಿ ವಿನೂತನ ರೀತಿಯಲ್ಲಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಅಧ್ಯಕ್ಷ ದಿನಕರ್ ಹೇರೂರು, ಮಾಹೆ ಮಣಿಪಾಲದ ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು, ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ನೇರಿ ಕರ್ನೇಲಿಯೋ , ಪ್ರಖ್ಯಾತ್ ಶೆಟ್ಟಿ , ಬಿ.ಅಶೋಕ್ ಕುಮಾರ್ ಶೆಟ್ಟಿ , ಅಖಿಲ ಭಾರತ ತುಳು ಒಕ್ಕೂಟದ ಮಾದ್ಯಮ ವಕ್ತಾರ ಮುಲ್ಕಿ ಕರುಣಾಕರ್ ಶೆಟ್ಟಿ
ಚಿಪ್ಪ್ಳುರ್ ಮಹಾರಾಷ್ಟ್ರ ಉದ್ಯಮಿ ಚಿತ್ತರಂಜನ್ ಶೆಟ್ಟಿ , ಉಡುಪಿ ಜಿಲ್ಲಾ ತುರವೇ ಮಾಜಿ ಅಧ್ಯಕ್ಷ ರೋಹಿತ್ ಕರಂಬಳ್ಳಿ , ನಿಕಟಪೂರ್ವ ಅಧ್ಯಕ್ಷ ಕೃಷ್ಣ ಕುಮಾರ್, ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳೆದ 16 ವರ್ಷಗಳಿಂದ ತುಳುನಾಡ ರಕ್ಷಣಾ ವೇದಿಕೆ ಸಮಾಜಕ್ಕೆ ಸಲ್ಲಿಸಿದ ಸೇವೆ ಮತ್ತು ಸಾಧನೆಗಳ ಬಗ್ಗೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವ ಸನ್ಮಾನ
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಇದೇ ವೇಳೆ ಗೌರವಿಸಲಾಯಿತು. ಸನ್ಮಾನಿತರ ವಿವರ ಹೀಗಿದೆ
ದೈವ ನರ್ತನ ಸೇವೆಗಾಗಿ: ಶ್ರೀ ಬೀರು ಪಾಣರ, ಮಾನವ ಹಕ್ಕುಗಳ ರಕ್ಷಣೆಗಾಗಿ: ಹಿರಿಯ ವಕೀಲ ಶ್ರೀ ಶಾಂತಾರಾಮ್ ಶೆಟ್ಟಿ, ದೈವಾರಾಧನೆ ಸೇವೆಗಾಗಿ: ಶ್ರೀ ಶ್ಯಾಮರಾಯ ಪೂಜಾರಿ ಅಮ್ಮುಂಜೆ, ನಿರ್ಗತಿಕರ ಸೇವೆಗಾಗಿ: ಶ್ರಮ ಹೋಮ್ ಡಾಕ್ಟರ್ ಫೌಂಡೇಶನ್‌ನ ಡಾ. ಶಶಿಕಿರಣ್ ಶೆಟ್ಟಿ, ಭರತನಾಟ್ಯಕ್ಕಾಗಿ: ವಿಶ್ವ ವಿಖ್ಯಾತ ರೆಮೋನ ಇವೆಟ್ ಪಿರೇರಾ, ಪತ್ರಿಕೋದ್ಯಮಕ್ಕಾಗಿ: ಖ್ಯಾತ ವರದಿಗಾರರಾದ ಶ್ರೀ. ಎಚ್. ಮೋಹನ್ ಉಡುಪ ಹಂದಾಡಿ ಮತ್ತು ಪ್ರವೀಣ್ ಮುದ್ದೂರು, ಚಲನಚಿತ್ರ ಕ್ಷೇತ್ರಕ್ಕಾಗಿ: ಶಟರ್ ಬಾಕ್ಸ್ ಫಿಲ್ಮ್ಸ್ ಖ್ಯಾತಿಯ ಸಚಿನ್. ಎಸ್ . ಶೆಟ್ಟಿ, ಕೃಷಿಗಾಗಿ: ತಾರಸಿ ಕೃಷಿ ಸಾಧಕ ಕೃಷ್ಣಪ್ಪ ಗೌಡ ಪಡ್ಡಂಬೈಲ್.
ಕಾರ್ಯಕ್ರಮದಲ್ಲಿ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ತು.ರ.ವೇ ವೈದ್ಯರ ಘಟಕ ಜಿಲ್ಲಾಧ್ಯಕ್ಷ ಡಾ. ಸಂದೀಪ್ ಸನಿಲ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುನಂದ ಕೋಟ್ಯಾನ್, ಗೌರವ ಸಲಹೆಗಾರ ಸುಧಾಕರ್ ಅಮೀನ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಸಭೆಯಲ್ಲಿ ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ ಕಾಪು ಮಹಿಳಾಧ್ಯಕ್ಷೆ, ಅನುಸೂಯ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ , ಪ್ರದೀಪ್ ಪೂಜಾರಿ ಚಾಂತಾರು , ಕಾರ್ಕಳ ತಾಲೂಕು ಅಧ್ಯಕ್ಷ , ರಮಾಕಾಂತ್ ಶೆಟ್ಟಿ , ಜಿಲ್ಲಾ ಜೊತೆ ಕಾರ್ಯದರ್ಶಿ , ಪ್ರೀತಂ ಡಿ’ಕೋಸ್ಟ , ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ, ಅವಿನಾಶ್ ಶೆಟ್ಟಿ , ಕಾರ್ಮಿಕ ಘಟಕ ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ, ಕಾರ್ತಿಕ್ ಕುಲಾಲ್, ರಂಜಿತ್ ಕುಲಾಲ್, ಸಂದೇಶ್ ಶೆಟ್ಟಿ, ನಿತಿನ್ ಶೆಟ್ಟಿ ಪೇತ್ರಿ, ಯುವ ಘಟಕ ಉಪಾಧ್ಯಕ್ಷ ರಾಹುಲ್ ಪೂಜಾರಿ, ತುರವೇ ಮುಖಂಡರುಗಳಾದ ಗುಲಾಬಿ ಕೋಟ್ಯಾನ್, ಶಾಂಭವಿ, ವಿಜಯಲಕ್ಷ್ಮಿ, ಜ್ಯೋತಿ ಆರ್, ಸುಲೋಚನಾ, ನಿರ್ಮಲಾ ಮೆಂಡನ್, ಲಕ್ಷ್ಮಿ, ಜಯಲಕ್ಷ್ಮಿ ಹೆಗಡೆ, ರಂಜಿತ್ ಶೆಟ್ಟಿ, ರತ್ನಾಕರ, ಶಂಕರ ಉಡುಪಿ, ಸಂಗೀತ ಶೆಟ್ಟಿ, ಗುಲಾಬಿ ಶೆಟ್ಟಿ, ಉಮಾವತಿ, ಧನವಂತಿ ವಿ ಪುತ್ರನ್, ಸಾಧನ, ಹರಿಣಾಕ್ಷಿ, ಶರ್ಮಿಳಾ, ಕುಶಲ ಕರ್ಕೇರ, ರಾಜೀವಿ ಶಿರ್ವ, ಕೃಷ್ಣ ಪೂಜಾರಿ, ಅಜೆಯ್ ಕುಲಾಲ್, ಸಚಿನ್ ಶೆಟ್ಟಿ, ಕಾರ್ತಿಕ್ ಆಚಾರ್ಯ, ಭಾಸ್ಕರ್ ಉಪ್ಪೂರು, ಬದ್ರುಲ್ಲ ಅಬ್ದುಲ್ಲ, ಹ್ಯಾರಿಸ್, ಮಮತ, ಮಮತಾ ಎಂ. ವಿನೋದ, ಆಶಾ ನಯಂಪಳ್ಳಿ, ಮತ್ತಿತರರು ಗೌರವ ಉಪಸ್ಥಿತರಾಗಿದ್ದರು. ಕಾಪು, ಬ್ರಹ್ಮಾವರ, ಕಾರ್ಕಳ ತಾಲೂಕು ಅಧ್ಯಕ್ಷರು ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ತುರವೇಯ ಹಲವು ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಲಾವಣ್ಯ ಪ್ರಾರ್ಥನೆ ಸಲ್ಲಿಸಿದರು. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಸ್ವಾಗತ ಭಾಷಣ ಮಾಡಿದರು. ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ವೇತಾ ಧನ್ಯವಾದ ಸಮರ್ಪಿಸಿದರು. ಯೋಗೀಶ್ ಗಾಣಿಗ ಕೊಳಲಗಿರಿ ಕಾರ್ಯಕ್ರಮ ನಿರೂಪಣೆ ಮಾಡಿದರು.