ಕಾಸರಗೋಡು :- ತುಳುವ ಮಹಾಸಭೆ ಕಾಸರಗೋಡು ನೇತೃತ್ವದಲ್ಲಿ, ತುಳು ವರ್ಲ್ಡ್ ಕಟೀಲು ಸಂಯೋಜನೆಯಲ್ಲಿ, ಕಾರ್ಮಾರು ಮಹಾ ವಿಷ್ಣು ದೇವಸ್ಥಾನ, ಉಳ್ಳೋಡಿ ಕಾಸರಗೋಡು ಇಲ್ಲಿ ದಿನಾಂಕ 01.08.2025 ರಂದು ಬೆಳಿಗ್ಗೆ 9:30 ರಿಂದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರು ರಚಿಸಿದ “ಮಂದಾರ ರಾಮಾಯಣ” ಸುಗಿಪು -ದುನಿಪು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,
ಮಂದಾರ ರಾಮಾಯಣ ಸುಗುಪು ದುನಿಪು ಕಾರ್ಯಕ್ರಮವನ್ನು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಪ್ರಶಾಂತ್ ರೈ ಪುತ್ತೂರು, ರಚನಾ ಚಿತ್ಕಲ್, ಲವಕುಕುಮಾರ್ ಜೊತೆಯಾಗಿ ಜನರಿಗೆ ಮನಮುಟ್ಟುವಂತೆ, ಸಭಾಂಗಣದಲ್ಲಿದ್ದ ಪ್ರೇಕ್ಷಕರನ್ನು ಭಕ್ತಿ ಭಾವದೆಡೆಗೆ ತಲುಪಿಸಿತು, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರ ಮಂದಾರ ರಾಮಾಯಣ ವಿವರಣೆಗೆ ಪ್ರೇಕ್ಷಕರು ಭಕ್ತಿ ಭಾವ ದೊಂದಿಗೆ ಭಕ್ತಿ ಭಾಷ್ಪವನ್ನೇ ತರಿಸಿತು.
ಮಂದಾರ ಪ್ರತಿಷ್ಠಾನದ ಅಧ್ಯಕ್ಷ, ಪತ್ರಕರ್ತ ಮಂದಾರ ರಾಜೇಶ್ ಭಟ್, ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮ ಆಯೋಜಿಸಿದ ಎಲ್ಲರನ್ನು ಮಂದಾರ ಪ್ರತಿಷ್ಠಾನದ ಪರವಾಗಿ ಹಾಗೂ ಮಂದಾರರ ಕುಟುಂಬದ ಪರವಾಗಿ ಅಭಿನಂದಿಸಿ, ಮುಂದೆಯೂ ಕಾರ್ಯಕ್ರಮಕ್ಕೆ ಸಹಕಾರ ನೀಡುವ ಭರವಸೆಯನ್ನು ನೀಡಿದರು.
ತುಳುವ ಮಹಾಸಭೆ ಕಾರ್ಯಾಧ್ಯಕ್ಷ ಡಾ. ರಾಜೇಶ್ ಕೃಷ್ಣ ಆಳ್ವ ಮಾತನಾಡಿ , ಮಂದಾರ ರಾಮಾಯಣ ಪ್ರಸರಣ ಕಾರ್ಯಕ್ರಮವನ್ನು ತುಳು ನಾಡಿನಾದ್ಯಂತ ಏರ್ಪಡಿಸುವ ಉದ್ದೇಶ ಹೊಂದಿದ್ದು,….
ಜೊತೆಗೆ ತುಳು ಭಾಷೆಯ ಬೆಳವಣಿಗೆ ಮತ್ತು ತುಳುವರ ಪ್ರಾಚೀನ ಜೀವನ ಶೈಲಿ ನಾಡಿಗೆ ಪರಿಚಯಿಸುವ
ಉದ್ದೇಶ ಹೊಂದಿದೆ, ತುಳುವರ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದೆ, ತುಳು ನಾಡಿನಾದ್ಯಂತ ತುಳುವ ಮಹಾಸಭೆ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು , ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ನೋಂದಾವಣೆಯಾಗುವುದರ ಮೂಲಕ ಸಹಕರಿಸುವಂತೆ ತುಳುವ ಮಹಾಸಬೆ ಪರವಾಗಿ ವಿನಂತಿಸಿದರು.
ಶ್ರೀ ಕ್ಷೇತ್ರಕಾರ್ಮಾರು ಆಡಳಿತ ಮುಖ್ಯಸ್ಥ ರಾಧಾಕೃಷ್ಣ ರೈ ಮಾತನಾಡಿ, ತುಳುವ ಮಹಾಸಭೆ ಹಾಗೂ ಮಂದಾರ ರಾಮಾಯಣ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದರು.
ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಹಾಗೂ ಬಲಿವಾಡು ಕೂಟದ ಪ್ರಯುಕ್ತ ಬೆಳಿಗ್ಗೆ ಮಹಾವಿಷ್ಣು ದೇವಸ್ಥಾನದಲ್ಲಿ ಪೂಜೆ, ಗಣ ಹೋಮ, ನಂತರದಲ್ಲಿ ಮಂದಾರ ರಾಮಾಯಣ ಕಾರ್ಯಕ್ರಮ , ಮಹಾಪೂಜೆ, ಅನ್ನಪ್ರಸಾದ ವಿತರಣೆ ಹಾಗೂ ಸಂಜೆ ದುರ್ಗಾಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವರದಿ:- ಮಂದಾರ ರಾಜೇಶ್ ಭಟ್