ಪಂಚ ಗ್ಯಾರಂಟಿಯ ಶಕ್ತಿ ಯೋಜನೆಗೆ 2 ವರ್ಷ, 500 ಕೋಟಿ ಪ್ರಯಾಣ ಮಾಡಿದ ಫಲಾನುಭವಿಗಳು, ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಲ್ಲಿ ಸಂಭ್ರಮ ಅಚರಿಸುತ್ತಿರುವ ಸಂದರ್ಭದಲ್ಲಿ ಬಸ್‌ ಕಂಡೆಕ್ಟರ್‌  ಆಗಿ ಕಾರ್ಯನಿರ್ವಹಿಸಿದ ವಿಧಾನ ಪರಿಷತ್‌ ಶಾಸಕ

0
18

ನಮ್ಮ  ರಾಜ್ಯದಲ್ಲಿ 2 ವರ್ಷಗಳ ಹಿಂದೆ ಪ್ರಾರಂಭಗೊಂಡ ಶಕ್ತಿಯೋಜನೆ ಸುಮಾರು 500 ಕೋಟಿ ಜನರು ಪ್ರಯಾಣವನ್ನು ಮಾಡುವ ಮೂಲಕ ಈ ಒಂದು ಯೋಜನೆ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದ್ದು, ಸುಮಾರು 12,500 ಕೋಟಿ ರೂಪಾಯಿ ಸರಕಾರ ಇವತ್ತು ಯೋಜನೆಗೆ ವಿನಿಯೋಗಿಸಿದೆ. ಹಾಗೂ ಕೆ.ಎಸ್.‌ಆರ್.ಟಿ.ಸಿ. ಗೆ ಪಾವತಿ ಮಾಡಿದೆ. ಅತ್ಯಂತ ಯಶಸ್ವಿ ಯೋಜನೆಯಾಗಿ ಮಹಿಳೆಯರಿಗೆ ಸ್ವಾವಲಂಬಿಯಾಗಿ ಶಕ್ತಿ ತುಂಬಿದ ಯೋಜನೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದು ಪಂಚ ಗ್ಯಾರಂಟಿಯ ಮೂಲಕ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ. ಇದರ ಬಗ್ಗೆ ಮಂಗಳೂರು ಕೆ.ಎಸ್.ಆರ್.ಟಿ.ಸಿ. ಡಿವಿಜನಲ್‌ ಕಂಟ್ರೋಲರ್‌ ಆಫೀಸಿನಲ್ಲಿ ಬಸ್ಸ್‌ಗಳಿಗೆ ಪೂಜೆ ಮಾಡುವ ಮೂಲಕ ಮತ್ತು ಬಸ್ಸಿನಲ್ಲಿ ಕಂಡೆಕ್ಟರ್‌ ಆಗಿ ಕಾರ್ಯನಿರ್ವಹಣೆ ಮಾಡಿದಂತಹ ಶಾಸಕರಾದ ಐವನ್‌ ಡಿʼಸೋಜಾರವರು 0 ಬೆಲೆಯ ಟಿಕೆಟ್‌ನ್ನು ನೀಡಿದರು.

ಮಹಿಳೆಯರಿಗೆ ಇದು ಸ್ವಾವಲಂಬಿ ಯೋಜನೆ ಮತ್ತು ಯಾವುದೇ ಮೊತ್ತವನ್ನು ಪಾವತಿಸದೇ ಪ್ರಯಾಣ ಮಾಡತಕ್ಕಂತಹ ವ್ಯವಸ್ಥೆ ಜಾರಿಗೆ ತರುವ ಮೂಲಕ ಮತ್ತು ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಿ ದೇವಸ್ಥಾನ ಪ್ರವಾಸಕ್ಕೆ ಹಾಗೂ ರಾಜ್ಯದ ವಿವಿಧ ಭಾಗಗಳ  ಪ್ರವಾಸಕ್ಕೆ  ಮತ್ತು ಮಕ್ಕಳ ಅಭಿವೃದ್ದಿಗಾಗಿ ಹೆಚ್ಚು ಸಾಧ್ಯತೆಯನ್ನು ಮಾಡಿದೆ. ಈ ಐದು ಪಂಚ ಗ್ಯಾಂರಂಟಿಗಳು ಇಂದು ಕರ್ನಾಟಕ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಕರ್ನಾಟಕ ಸರಕಾರ ದೇಶದಲ್ಲಿಯೇ ಮೇಲ್ಪಂಕ್ತಿಯನ್ನು ಹಾಕಿಕೊಂಡಿದೆ. ಯಾವುದೇ ಯೋಜನೆಯಲ್ಲಿ ಯಶಸ್ವಿಯಾಗಿ ಜಾರಿಗೆ ಗೊಳಿಸುವುದು ಸರಕಾರದ ಕರ್ತವ್ಯವಾಗಿದ್ದು, ಐದು ಯೋಜನೆಯು ತುಂಬಾ  ಯಶಸ್ವಿಯಾಗಿ ನಿರ್ವಹಣೆ  ಮಾಡಿರುವುದು ಎಂದು ಐವನ್‌ ಡಿʼಸೋಜಾ ಈ ಸಂದರ್ಭದಲ್ಲಿ ಮಾತನಾಡುತ್ತಾ ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್‌ ವತಿಯಿಂದ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಮಾಜಿ ಸಾಸಕರಾದ ಜೆ.ಆರ್.‌ ಲೋಬೋ, ಮಾಜಿ ಎಂ.ಎಲ್.ಸಿ. ಹರೀಶ್‌ ಕುಮಾರ್‌, ಕೆ.ಪಿ.ಸಿ.ಸಿ. ಉಪಾಧ್ಯಕ್ಷರಾದ ಪದ್ಮರಾಜ್‌,  ಕೆ.ಎಸ್.ಆರ್.ಟಿ.ಸಿ. ಡಿ.ಸಿ ರಾಜೇಶ್‌, ,ಕಾರ್ಪೋರೇಟ್‌ರ್‌ಗಳಾದ ಶಶಿಧರ್‌ ಹೆಗ್ಡೆ, ನವೀನ್‌ ಡಿʼಸೋಜಾ, ಶಾಲೆಟ್‌ ಪಿಂಟೋ, ಮೀನಾ ಟೆಲ್ಲಿಸ್‌, ಆಲ್ಟ್ಟನ್‌ ಡಿ ಕುನಹ್ಹ ಸತೀಶ್‌ ಪೆಂಗಲ್‌, ಯೋಗಿಶ್‌ ನಾಯ್ಕ್‌, ನವಾಜ್‌, ನೀತು, ವಿದ್ಯಾ, ರಿತೇಶ್‌, ಶಾಂತಲಾ ಗಟ್ಟಿ, ಪ್ರಶಾಂತ್‌, ಚಂದ್ರಹಾಸ್‌ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here