ಕಾಸರಗೋಡು:ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಹೊಂದುವುದರೊಂದಿಗೆ ಉತ್ತಮ ಸಂಸ್ಕಾರವಂತರಾಗಬೇಕು. ಉತ್ತಮ ಸಂಸ್ಕಾರ ಹೊಂದಬೇಕಾದರೆ ಪಠ್ಯ ಪುಸ್ತಕ ಮಾತ್ರವಲ್ಲದೆ ಇತರ ಉತ್ತಮ ಪುಸ್ತಕಗಳನ್ನು ಓದಬೇಕು.. ಆಗ ಭಾಷಾ ಸ್ನೇಹ, ಸಾಹಿತ್ಯ ಸಂಪರ್ಕ, ತನ್ ಮೂಲಕ ಉತ್ತಮ ಸಾಮಾಜಿಕ ಕಳ ಕಳಿಯ ಸಂಸ್ಕಾರ ಮೈಗೂಡಿ ಸಮಾಜಕ್ಕೆ ಹಿತವಾಗುವ ವ್ಯಕ್ತಿಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು ಎಂದು ಡಾ. ಹೊಳ್ಳ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇವರು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ, ನಗರದ ಭಾಲ ಭವನ ವಿದ್ಯಾ ಕೇಂದ್ರ ಹಾಗೂ ಶ್ರೀ ವೆಂಕಟ್ರಮಣ ಕೃಪಾಶ್ರಿತ ಯಕ್ಷಗಾನ, ಅಧ್ಯಯನ, ಸಂಶೋಧನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಂಥಾಲಯ ವಾಚನ ವಾರಾಚರಣೆ ಸಮಾರಂಭ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ನಗರದ ಬಿ. ಇ. ಎಂ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ರಾಜೇಶ್ ಚಂದ್ರ ಕೆ. ಪಿ., ಪತ್ರಕರ್ತ ಜಗನ್ನಾಥ್ ಶೆಟ್ಟಿ, ಮಾತನಾಡಿದರು. ಬಾಲಭವನ ಮುಖ್ಯ ಉಪಾಧ್ಯಯನಿ ಲೀಲಾವತಿ ನಾಯರ್, ಅದ್ಯಾಪಿಕೆ ಜಯಂತಿ, ಕನ್ನಡ ಭವನ ಸಾರ್ವಜನಿಕ ವಾಚನಾಲಾಯ ಸಂಚಾಲಕಿ ಸಂದ್ಯಾ ರಾಣಿ ಟೀಚರ್, ಸ್ವಾಗತಿಸಿದರು. ಭಜನಾ ಗುರು ಜಯಾನಂದ ಕುಮಾರ್ ಹೊಸದುರ್ಗ, ಪತ್ರಕರ್ತ ಜಯ ಮನಿಯಮ್ ಪಾರೆ, ಪತ್ರಕರ್ತ ಪ್ರದೀಪ್ ಬೇಕಲ್, ವಿದ್ಯಾರ್ಥಿಗಳಿಗೆ, ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿದರು. ಈ ಕಾರ್ಯಕ್ರಮ ದಲ್ಲಿ ಶಾಲಾ ಅದ್ಯಾಪಿಕೆ ಶ್ರೀಮತಿ ಜಯಂತಿ ಇವರನ್ನು ಕನ್ನಡ ಭವನದ ವತಿಯಿಂದ ಡಾ. ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ಟೀಚರ್ ಅಭಿನಂದಿಸಿ ಗೌರವಿಸಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕನ್ನಡ ಭವನ ಗ್ರಂಥಾಲದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಜಯ ಮನಿಯಮ್ ಪಾರೆ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.
Home Uncategorized ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಹೊಂದುವುದರೊಂದಿಗೆ ಉತ್ತಮ ಸಂಸ್ಕಾರವಂತರಾಗಬೇಕು. ಡಾ. ವೆಂಕಟ್ರಮಣ ಹೊಳ್ಳ.