ಜನ್ಮಭೂಮಿ ಶ್ರೇಷ್ಠವಾದುದು – ಪಲಿಮಾರು ಸ್ವಾಮೀಜಿ

0
37

ಕಟೀಲಿನಲ್ಲಿ ವಿದ್ಯಾಧೀಶತೀರ್ಥ ಸ್ವಾಮೀಜಿಗೆ ಗುರುವಂದನೆ


ಕಟೀಲು : ಜನ್ಮ ಭೂಮಿ ಯಾವತ್ತಿಗೂ ಶ್ರೇಷ್ಟವಾದುದು. ಹೆಚ್ಚು ಪ್ರೀತಿಯದ್ದು. ಕಟೀಲು ಜನ್ಮಭೂಮಿ. ಅದೇ ರೀತಿ ನಮ್ಮ ತಾಯಿಭೂಮಿ. ಇಲ್ಲಿ ನಡೆದ ಗುರುವಂದನೆ ತಾಯಿಯ ಅನುಗ್ರಹ. ತಾಯಿಗೆ ಏನು ಕೊಟ್ಟರೂ, ಎಷ್ಟು ಕೊಟ್ಟರೂ ಸಮಾಧಾನ ಇರುವುದಿಲ್ಲ. ಅದೇ ರೀತಿ ತಾಯಿಯ ಕ್ಷೇತ್ರದಲ್ಲಿ ಪ್ರೀತಿಯಿಂದ , ಕೃಷ್ಣನ ಪೂಜೆ ಮಾಡಿದುಕ್ಕಾಗಿ ಗೌರವದಿಂದ ಗುರುವಂದನೆ ಮಾಡಿದ್ದೀರಿ. ತಾಯಿಯ ಆಶೀರ್ವಾದ ಇದು. ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಕಟೀಲಿನಲ್ಲಿ ಕಟೀಲು ದೇವಸ್ಥಾನ ಹಾಗೂ ಎಕ್ಕಾರು ಶಿಬರೂರು ಕೊಡೆತ್ತೂರು ಅತ್ತೂರು ಗ್ರಾಮಸ್ಥರಿಂದ ದುರ್ಗಾ ಮಕ್ಕಳ ಮೇಳ ಕಟೀಲು ಪ್ರತಿಷ್ಠಾನಗಳ ಸಹಯೋಗದಲ್ಲಿ ಹುಟ್ಟೂರ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ವೇದವ್ಯಾಸ ತಂತ್ರಿ, ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ. ರಾಘವೇಂದ್ರ ಭಟ್, ಶರವು ರಾಘವೇಂದ್ರ ಶಾಸ್ತ್ರಿ, ಸಂಸದ ನಳಿನ್ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್, ಶಂಕರ ಇಲೆಕ್ಕ್ರಿಕಲ್ಸ್ ರಾಜೇಶ್ ಶೆಟ್ಟಿ, ಲಕ್ಷ್ಮೀ ಪ್ರಾಣೇಶ್ ರಾವ್, ಮಾಜಿ ಸಚಿವ ಅಭಯಚಂದ್ರ, ಕರುಣಾಕರ ಶೆಟ್ಟಿ ಮರವೂರು, ವಿರಾರ್ ಶಂಕರ ಶೆಟ್ಟಿ, ಎಂ. ಬಿ. ಪುರಾಣಿಕ್, ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ ಕಲ್ಕೂರ, ಸಿ. ಎ. ಸುದೇಶ್ ರೈ, ಕೊಂಜಲುಗುತ್ತು ಪ್ರಭಾಕರ ಶೆಟ್ಟಿ, ಸುಬ್ರಹ್ಮಣ್ಯಪ್ರಸಾದ್, ಪ್ರದ್ಯುಮ್ನ ರಾವ್, ಉಮೇಶ್ ಗುತ್ತಿನಾರ್, ರಘುನಾಥ ಸೋಮಯಾಜಿ, ಕಟೀಲು ದೇಗುಲದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ, ಪ್ರವೀಣ್ ದಾಸ್ ಭಂಡಾರಿ, ಮತ್ತಿತರರಿದ್ದರು. ವಿದ್ವಾನ್ ಅದ್ಯಪಾಡಿ ಹರಿದಾಸ ಭಟ್ ಸ್ವಾಮೀಜಿಯ ಅಭಿನಂದನ ಮಾತುಗಳನ್ನಾಡಿದರು. ಶ್ರೀಹರಿನಾರಾಯಣದಾಸ ಅಸ್ರಣ್ಣ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ನಿರೂಪಿಸಿದರು.

LEAVE A REPLY

Please enter your comment!
Please enter your name here