ಕಾರ್ಕಳ: ಈ ಬಾರಿಯ ದೀಪಾವಳಿಗೆ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ಬಣ್ಣ ಬಣ್ಣದ ಹಾಗೂ ವಿವಿಧ ಆಕಾರಗಳೊಂದಿಗೆ ಸಿದ್ಧಗೊಳಿಸಿದ ಮಣ್ಣಿನ ಹಣತೆಗಳನ್ನು ಶಾಲಾ ಶಾರದ ಪೂಜಾ ಕಾರ್ಯಕ್ರಮದಂದು ನಮ್ಮ ಶಾಲಾ ದಾನಿಗಳು ಹಾಗೂ ಹಿತೈಷಿಗಳು ಆದ ಕಾರ್ಕಳ್ ಕಮಲಾಕ್ಷ ಕಾಮತ್, ಚಾರ್ಟಡ್ ಅಕೌಟೆಂಟ್ ಕಾರ್ಕಳ ಇವರು ದೀಪ ಬೆಳಗಿಸುವುದರ ಜೊತೆ ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಇದು ಒಳ್ಳೆಯ ಕಾರ್ಯ ಯೋಜನೆ ಎಂದು ಶ್ಲಾಘಿಸಿದರು.

ಸಿದ್ಧಗೊಳಿಸಿದ ಮಣ್ಣಿನ ಬಣ್ಣದ ಹಣತೆಗಳನ್ನು ಕಳೆದ 3 ವರ್ಷದಿಂದ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ತಯಾರಿಸುತ್ತಿದ್ದು ಕಳೆದ 2 ವರ್ಷವೂ ದೀಪಾವಳಿ ಹಬ್ಬ ಪ್ರಾರಂಭವಾಗುವ ಮೊದಲೇ ರಾಜ್ಯದ ಮೂಲೆ ಮೂಲೆಗಳಿಗೆ ಎಲ್ಲಾ ಹಣತೆಗಳು ಮಾರಾಟವಾಗಿರುವುದು ವಿಶೇಷ. ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಬದುಕಲು ನಡೆಸುವ ಪ್ರಯತ್ನದಲ್ಲಿ ಇದೀಗ ಕೇವಲ ಹತ್ತು ರೂಪಾಯಿಂದ ಪ್ರಾರಂಭಗೊಳ್ಳುವ ಈ ಬಣ್ಣದ ಹಣತೆಗಳನ್ನು ಶಾಲೆಗೆ ಭೇಟಿ ನೀಡಿ ನಿಮ್ಮ ಆಯ್ಕೆಯ ಹಣತೆಗಳನ್ನು ಖರೀದಿಸಿ ಪ್ರೋತ್ಸಾಹಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ವಿನಂತಿ ಮಾಡುತ್ತದೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ. ಗಣಪತಿ ಪೈ, ಕಾರ್ಯದರ್ಶಿ ರಘುನಾಥ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್ ಅತಿಥಿ ಗಣ್ಯರು, ಶಾಲಾ ಹಿತೈಷಿಗಳು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480531469, 7619255170.