ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.) ಮತ್ತು ಮಹಿಳಾ ಘಟಕ ಇದರ ಕುಲಾಲ ಸಮುದಾಯ ಭವನದ ಶಿಲನ್ಯಾಸದ ಸಮಾರೋಪ ಕಾರ್ಯಕ್ರಮ ನರಿಕೊಂಬು ಕುಂಬಾರರ ಯಾನೆ ಕುಲಾಲರ ಕಟ್ಟಡ ಸಮಿತಿ ಅಧ್ಯಕ್ಷ ನಾಗೇಶ್ ಕುಲಾಲ್ ನರಿಕೊಂಬು ರವರ ಅಧ್ಯಕ್ಷತೆಯಲ್ಲಿ ಆದಿತ್ಯವಾರ ರಾತ್ರಿ ಪಾಣೆಮಂಗಳೂರು ಸತ್ಯ ಶ್ರೀ ಕಲ್ಯಾಣ ಮಂಟಪದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಭಟ್ ಪಲ್ಲತ್ತಿಲ್ಲ ಹಾಗೂ ಮಚ್ಚೇಂದ್ರ ಸಾಲಿಯನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ದಾಸ್ ಪ್ರಮೋಷನ್ ಮ್ಯಾನೇಜಿಂಗ್ ಡೈರೆಕ್ಟರ್ ಅನಿಲ್ ದಾಸ್, ಬಿಜೆಪಿ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಚಂದಪ್ಪ ಮೂಲ್ಯ, ಬಂಟ್ವಾಳ ತಾಲೂಕು ಕುಲಾಲ ಸುಧಾಕರ ಸಂಘ ಬಿ ಕೃಷ್ಣಪ್ಪ,ನರಿಕೊಂಬು ಕುಲಾಲ್ ಸಂಘದ ಅಧ್ಯಕ್ಷ ಎಂ ಪಿ ಸುಂದರ, ಮಹಿಳಾ ಘಟಕ ಅಧ್ಯಕ್ಷ ಮಾಲತಿ ಕರುಣಾಕರ್, ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಮಳಲಿ ಯ ಸುಂದರ ಬಂಗೇರ, ಉದ್ಯಮಿ ದಿನೇಶ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು
ಮಕ್ಕಳಿಂದ ಹಾಗೂ ಊರವರಿಂದ ಮನರಂಜನ ಕಾರ್ಯಕ್ರಮ, ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೇಶಿವಾಲಯ ತಂಡದಿಂದ ಡ್ಯಾನ್ಸ್ ಕಾರ್ಯಕ್ರಮ ಜರಗಿತು.
ಕಿರಣ್ ಅಟ್ಲೂರು ಸ್ವಾಗತಿಸಿ, ವಸಂತ್ ಭೀಮಗದ್ದೆ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.