ಶಿವಮೊಗ್ಗದಲ್ಲಿ ಬಾರಿ ಪ್ರಶಂಸೆ ಪಡೆದ ತೆನ್ಕಾಯಿಮಲೆ ಪ್ರೀಮಿಯರ್ ಶೋ – ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದಿಂದ ತೆನ್ಕಾಯಿಮಲೆ ತಂಡಕ್ಕೆ ಗೌರವ ಸನ್ಮಾನ

0
70

ಇನ್ಸ್ಪೈರ್ ಫಿಲಂಸ್ ತಂಡದ ರವಿಚಂದ್ರ ರೈ ಬಿ ಮುಂಡೂರು ನಿರ್ದೇಶನದ ಈಗಾಗಲೇ ಪುತ್ತೂರು ಮತ್ತು ಮಂಗಳೂರಿನ ಪ್ರೀಮಿಯರ್ ಷೋಗಳಲ್ಲಿ ಜನರ ಮನ ಗೆದ್ದು ಇತಿಹಾಸ ನಿರ್ಮಿಸಿರುವ ತೆನ್ಕಾಯಿಮಲೆ ಚಿತ್ರದ ಪ್ರೀಮಿಯರ್ ಷೋ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ದಿನಾಂಕ 12 ರಂದು ಜನಭರಿತ ಪ್ರದರ್ಶನದೊಂದಿಗೆ ಯಶಸ್ವಿಗೊಂಡಿತು.

ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ ಮತ್ತು ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಶೆಟ್ಟಿ, ಕೊಲ್ಲಾಪುರದಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರಾದ ರಂಗನಾಥ,ಜ್ಞಾನ ಗಂಗಾ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ದಿನೇಶ್ ಹಾಗೂ ಮಾನಸ ವಿದ್ಯಾಲಯ ಮುಖೋಪಾಧ್ಯಾರಾದ ರಾಘವೇಂದ್ರ ರವರು ನೆರವೇರಿಸಿದರು . ಚಿತ್ರದ ನಿರ್ದೇಶಕರಾದ ರವಿಚಂದ್ರ ರೈ ಮುಂಡೂರು ರವರಿಗೆ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಮುಖ್ಯ ರೂವಾರಿ ಸದಾನಂದ ಶೆಟ್ಟಿ, ಮಮತಾ ಸದಾನಂದ ಶೆಟ್ಟಿ , ಅನುಷ ಶೆಟ್ಟಿ ,ಅನುಶ್ರೀ ಶೆಟ್ಟಿ ,ಪ್ರಭಾಕರ್ ಶೆಟ್ಟಿ ಶಿವಾನಂದ ಶೆಟ್ಟಿ ಹಾಗೂ ಇತರ ಎಲ್ಲಾ ಬಂಧು ಮಿತ್ರರು ,ಸಿನಿ ಪ್ರೇಕ್ಷಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನೆರೆದಿದ್ದರು . ಈ ಕಾರ್ಯಕ್ರಮದಲ್ಲಿ ತೆನ್ಕಾಯಿ ಮಲೆ ಚಿತ್ರ ತಂಡದ ಸದಸ್ಯರು ಚಿತ್ರದ ಸಹಾಯಕ ನಿರ್ದೇಶಕರಾದ ಪ್ರವೀಣ್ ಕುಮಾರ್ ಮುಲಾರ್ , ಅಶ್ವಥ್ ಎನ್ ಪುತ್ತೂರು ಹಾಗೂ ಅನುಪ್ತ ರವಿಚಂದ್ರ ರೈ , ಕಾರ್ತಿಕ್ ರೈ ಹಾಗೂ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.


ಶಿವಮೊಗ್ಗದ ಜನರಿಂದ ಬಂದ ಮೆಚ್ಚುಗೆಗಳು ತಂಡದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು.
ಪ್ರೇಕ್ಷಕರ ಚಪ್ಪಾಳೆಗಳು ಪ್ರೋತ್ಸಾಹದ ಮೂಲಕ ತೆನ್ನಾಯಿಮಲೆ ಚಿತ್ರವು ಇಂಡಸ್ಟ್ರಿಯಲ್ಲಿ ಹೊಸಬರಿಗೆ ಹೊಸತನಕ್ಕೆ ಹೊಸದಾರಿಯನ್ನು ಮಾಡಿಕೊಟ್ಟಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

LEAVE A REPLY

Please enter your comment!
Please enter your name here