ಮಂಗಳೂರು ಫೆ 06 : ಭಾರತೀಯ ವೈದ್ಯಕೀಯ ಸಂಘ, ಮಂಗಳೂರು ಶಾಖೆ ಮತ್ತು ಮಹಿಳಾ ವೈದ್ಯರ ಸಂಘದ ಜಂಟಿ ಆಶ್ರಯದಲ್ಲಿ ದಿ. ಡಾ. ಹೆಚ್, ಟಿ, ಮನೋರಮಾ ರಾವ್ ಸ್ಮಾರಕ ದತ್ತಿ ಉಪನ್ಯಾಸವನ್ನು 35 : 09-02-2026ರಂದು ಸಂಜೆ 07:30 ಗಂಟೆಗೆ ಐ. ಎಂ ಎ. ಡಾ. ಏ. ವಿ. ರಾವ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ತುಮಕೂರು ನಗರದ ಕಸ್ತೂರ್ಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ. ದುರ್ಗಾದಾಸ್ ಅಸ್ರನ್ನಾ ಅವರು ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿ ದತ್ತಿ ಉಪನ್ಯಾಸವನ್ನು ನೀಡಲಿರುವರು.
ಈ ಸಂದರ್ಭದಲ್ಲಿ ಕೆ.ಎಸ್. ಹೆಗ್ಡೆ ಕಾಲೇಜಿನ ನಿವೃತ್ತ ಸ್ತ್ರಿ ಆರೋಗ್ಯ ತಜ್ಞರು ಡಾ. ವಸಂತಿ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ನಗರದ ಲೇಡಿ ಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ. ದುರ್ಗಪ್ರಸಾದ್ ಎಮ್. ಆರ್. ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿರುವರು. ಹಾಗೂ ನಗರದ ಜಯಶ್ರೀ ಆಸ್ಪತ್ರೆಯ ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಹೆಚ್. ಟಿ. ಜಯಪ್ರಕಾಶ್ ರಾವ್ ರವರು ಪೋಶಕರಾಗಿ ಕಾರ್ಯ ನಿರ್ವಹಿಸಲಿರುವರು.
ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸದಾನಂದ ಪೂಜಾರಿಯವರು ವಹಿಸಲಿರುವರು ಎಂದು ಮಹಿಳಾ ವೈದ್ಯರ ಸಂಘದ ಅಧ್ಯಕ್ಷೆ ಡಾ. ಪ್ರೇಮಾ ಡಿ’ಕುನ್ಹಾ ರವರು ಪತ್ರಿಕಾ ಮಾಹಿತಿ ನೀಡಿದ್ದಾರೆ.
