ಮಾಹಿ ಚಿತ್ರದ ಪ್ರಥಮ ಪ್ರಿಮಿಯರ್ ಶೋ ಹೌಸ್‌ ಪುಲ್‌

0
131

ಪ್ರೇಕ್ಷಕರ ಮನ ಗೆದ್ದ ಮಾಹಿ

ಪುತ್ತೂರು: ಮಾಹಿ ಚಿತ್ರದ ಪ್ರಥಮ ಪ್ರಿಮಿಯರ್ ಶೋ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಭಾನುವಾರ ಮಧಾಹ್ನ 2:00 ಗಂಟೆಯಿಂದ 7:00 ಗಂಟೆವರೆಗೆ ನಡೆಯಿತು. ಒಟ್ಟು ನಾಲ್ಕು ಶೋ ಗಳು ನಡೆದಿದ್ದು ಇದರಲ್ಲಿ ಎಲ್ಲಾ ಶೋ ಗಳು ಕೂಡ ಭರ್ತಿಯಾಗಿದ್ದವು. ಈ ನಾಲ್ಕೂ ಶೋ ಗಳಲ್ಲಿ ಅತಿಥಿ ಅಭ್ಯಾಗತರಾಗಿ ಅನೇಕ ಗಣ್ಯರು ಆಗಮಿಸಿದ್ದರು. ಮುಖ್ಯವಾಗಿ ವಿಜಯ್ ಸಾಮ್ರಾಟ್ ನ ಅಧ್ಯಕ್ಷರಾಗಿರುವ ಸಹಜ್ ರೈ, ಹಿಂದೂಪರ ಸಂಘಟನೆಗಾರರಾದ ಅರುಣ್ ಪುತ್ತಿಲ, ಪ್ರಸಿದ್ಧ ಚಲನಚಿತ್ರ ನಟರಾದ ಎಂ ಕೆ ಮಠ, ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅನುವoಶೀಯ ಮುಖ್ಯಸ್ಥರಾದ ವಿನೋದ್ ಕುಮಾರ್ ರೈ, ಸುದ್ದಿಬಿಡುಗಡೆ ಸಂಪಾದಕರಾದ ಹೇಮಾ ಜಯರಾಮ್ ರೈ, ಚಲನಚಿತ್ರ ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ, ಚಲನಚಿತ್ರ ವಿತರಕರಾದ ಬಾಲಕೃಷ್ಣ ಶೆಟ್ಟಿ, ಗಜಾನನ ಶಾಲೆಯ ಸಂಚಾಲಕರಾದ ಅಚ್ಚುತ ಮೂಡಿತ್ತಾಯ, ತುಳುನಾಡ ವಾರ್ತೆಯ ಸಂಪಾದಕರಾದ ಪುನೀತ್ ಮುಂಡ್ಕೂರು, ಚಾವಡಿ ಪೇಜ್ ನ ಮುಖ್ಯಸ್ಥರಾದ ಪ್ರಸಾದ್ ಕುಮಾರ್, ಶ್ರೀನಾಥ್ ಡವಾರ್, ನಿವೃತ್ತ ಶಿಕ್ಷಕರಾದ ನಾರಾಯಣ್ ರೈ ಕುಕ್ಕುವಳ್ಳಿ, ಉಮೇಶ್ ನಾಯಕ್, ಸಾಯಿಶ್ರುತಿ ಪಿಲಿಕಜೆ, ಜೋಹನ್, ಹೇಮಾನಾಥ ಶೆಟ್ಟಿ ಕಾವು, ಕೃಷ್ಣಪ್ರಸಾದ್ ಆಳ್ವ, ವಿನೋದ್ ರೈ ಗುತ್ತು, ಭಾಗೇಶ್ ರೈ, ಪ್ರಸಾದ್ ಶಾನುಭೋಗ, ಜಯಂತ್ ನಡುಬೈಲು, ವಿಜಯ್ ಹರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಈ ಚಿತ್ರವನ್ನು ಕೀರ್ತನ್ ಶೆಟ್ಟಿ ನಿರ್ದೇಶಸಿ, ಅಜಿತ್ ಬಿ ಟಿ ನಿರ್ಮಾಣದಲ್ಲಿ, ಸುಪ್ರೀತ ಕೆ ಎಸ್, ಜೈದೀಪ್ ಕೊರಂಗ, ಹಿತಾಶ್ರೀ ಶೆಟ್ಟಿ ಇವರ ಸಹ ಬರಹದಲ್ಲಿ, ಪ್ರಶಾಂತ್ ಶೇಣಿಯವರ ಛಾಯಾ ಗ್ರಾಹಣದಲ್ಲಿ, ಶ್ರೀನಾಥ್ ಪಾವೂರ್ ಇವರ ಸಂಕಲನದಲ್ಲಿ, ರೋಹಿತ್ ಪೂಜಾರಿ ಇವರ ಸಂಗೀತದಲ್ಲಿ, ಈ ಚಿತ್ರ ಮೂಡಿ ಬಂದಿದೆ. ಚಿತ್ರದ ಇನ್ನೊಂದು ಪ್ರಿಮಿಯರ್ ಶೋ ಸದ್ಯದಲ್ಲೇ ಆಯೋಜಿಸಲಾಗುವುದು ಎಂದು ಚಿತ್ರತಂಡ ಹಂಚಿಕೊಂಡಿದೆ.

LEAVE A REPLY

Please enter your comment!
Please enter your name here