ವಿದ್ಯಾರ್ಥಿಗಳ ಉನ್ನತ ಸಾಧನೆಯೇ ಶಿಕ್ಷಕ ವೃತ್ತಿಯ ಧನ್ಯತೆ – ಭಾಗ್ಯಲಕ್ಷ್ಮೀ ರಾವ್

0
100

ನಮ್ಮ ಹಳೆಯ ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ತರ ಸಾಧನೆಗೈಯುವುದನ್ನು ನೋಡುವಲ್ಲಿ ನಮ್ಮ ಶಿಕ್ಷಕ ವೃತ್ತಿಯ ಧನ್ಯತೆ ಅಡಗಿದೆ ಎಂದು ಶಾರದಾ ವಿದ್ಯಾಲಯ ಇದರ ನಿವೃತ್ತ ಶಿಕ್ಷಕಿ ಭಾಗ್ಯಲಕ್ಷ್ಮೀ ರಾವ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ , ಶಿಕ್ಷಕ ದಿನಾಚರಣೆಯ ಅಂಗವಾಗಿ ಮಂಗಳೂರಿನ ತಮ್ಮ ನಿವಾಸದಲ್ಲಿ ಸಲ್ಲಿಸಿದ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಕ ವೃತ್ತಿ ಬಹಳ ಪವಿತ್ರ ಮತ್ತು ಅದರಿಂದ ಸಿಗುವ ಶಿಷ್ಯ ಸಂಪತ್ತೇ ನಿಜವಾದ ಸಂಪತ್ತು ಅಲ್ಲದೆ ನಮ್ಮ ಅನೇಕ ಶಿಷ್ಯರು ಉನ್ನತ ಸಾಧನೆ ಮಾಡಿ , ಎಳವೆಯಲ್ಲಿ ಕಲಿಸಿದ ಗುರುಗಳನ್ನು ನೆನಪಿಟ್ಟುಕೊಳ್ಳುವುದು , ಪದಗಳಲ್ಲಿ ಹಿಡಿದಿಡಲಾಗದ ಅನುಭವ ಎಂದು ವಿವರಿಸಿದರು.
ಕ ಸಾ ಪ ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀಮೋಹನ ಚೂಂತಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ ಸಾ ಪ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ರತ್ನಾವತಿ ಬೈಕಾಡಿ,ಶ್ರೀಮತಿ ಮೀನಾಕ್ಷ್ಮೀ ರಾಮಚಂದ್ರ, ಜಿಲ್ಲಾ ಘಟಕದ ಸನತ್ ಜೈನ್, ಸುರೇಶ್ ರಾವ್, ಡಾ ರಾಜಶ್ರೀ ಮೋಹನ್ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಎನ್. ಗಣೇಶ್ ಪ್ರಸಾದ್ ಜೀ ಸ್ವಾಗತಿಸಿ, ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ದಿಸಿದರು.

LEAVE A REPLY

Please enter your comment!
Please enter your name here