ಗೀತಾ ಮಂದಿರದಲ್ಲಿಂದು ಪೂಜ್ಯ ಪರ್ಯಾಯ ಶ್ರೀಪಾದಂಗಳವರಿಂದ ಹಲಸು ಮಾವು ಮೇಳಕ್ಕೆ ಚಾಲನೆ

0
74

ಈ ಸಂದರ್ಭದಲ್ಲಿ ಪೂಜ್ಯ ಪರ್ಯಾಯ ಶ್ರೀಪಾದರು ಮಾತಾಡುತ್ತಾ, ಭಗವದ್ ಗೀತೆಯಲ್ಲಿ ಪತ್ರಂ ಪುಷ್ಪಂ ಫಲಂ ತೋಯಂ ಎಂದು ಹೇಳಿ ಯಾವುದಾದರೂ ಫಲವನ್ನು ನೀಡಿದರೂ ನಾನು ಸಂತೋಷ ಗೊಳ್ಳುತ್ತೇನೆ ಎಂದು ಭಗವಾನ್ ಶ್ರೀಕೃಷ್ಣ ತಿಳಿಸಿದಂತೆ,ಕರಾವಳಿಯ ಭಾಗದಲ್ಲಿ ಹೇರಳವಾಗಿ ದೊರೆಯುವ ಹಲಸು ಮಾವುಗಳ ವೈವಿಧ್ಯವನ್ನು ತಜ್ಜನ್ಯ ಖಾದ್ಯಗಳನ್ನು ಈ ಮೇಳದಲ್ಲಿ ಪ್ರದರ್ಶಿಸುತ್ತಿದ್ದಾರೆ.
ಜನರು ಶ್ರೀಕೃಷ್ಣನ್ನು ಸ್ಮರಿಸಿ ಈ ಮೇಳದ ಪ್ರಯೋಜನ ವನ್ನು ಪಡೆದುಕೊಳ್ಕಬಹುದು, ತನ್ಮೂಲಕ ಕರ್ಮ ಫಲದ ಸಮರ್ಪಣೆ ಯಾಗುವುದು ಎಂದು ಹರಸಿ ಬೆಳೆಗಾರರನ್ನು ಪ್ರೋತ್ಸಾಹಿಸಿ ಎಂದು ಕರೆಯಿತ್ತರು.
ಮುಖ್ಯ ಅತಿಥಿಗಳಾಗಿ ಭವಾನಿ ಗ್ರೂಪ್ಸ್ ನ ಮಾಲಕ ಶ್ರೀ ಕುಸುಮೋದರ ಶೆಟ್ಟಿ ಯವರು ಆಗಮಿಸಿದ್ದರು.
ಭಾರತ್ ಮೇಳದ ಸಂಚಾಲಕ ಶ್ರೀ ರಮಣಾಚಾರ್ಯ ಸ್ವಾಗತಿಸಿ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ದಿವಾನರಾದ ನಾಗರಾಜಾಚಾರ್ಯ , ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ,ರತೀಶ್ ತಂತ್ರಿ,ರಮೇಶ್ ಭಟ್,ಅನಂತಕೃಷ್ಣ,ಪ್ರಮೋದ್ ಸಾಗರ್ ಮುಂತಾದವರು ಉಪಸ್ಥಿತರಿದ್ದರು.
ಈ ಹಲಸು ಮೇಳವು ಗೀತಮಂದಿರದಲ್ಲಿ ಗೀತಾಮಂದಿರದಲ್ಲಿ ಬೆಳಿಗ್ಗೆ 8 ರಿಂದ ಸಾಯಂ 8 ರ ವರೆಗೆ ಸಾರ್ವಜನಿಕರಿಗಾಗಿ ತೆರೆದಿರುವುದು ಎಂದು ಸಂಚಾಲಕ ರಮಣಾಚಾರ್ಯ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here