ದ. ಕ. ಜಿ. ಪಂ.ಕಿ.ಪ್ರಾ. ಶಾಲೆ ಏಮಾಜೆ ನೂತನ ತರಗತಿ ಕೊಠಡಿ ಶಿಲಾನ್ಯಾಸ ಕಾರ್ಯಕ್ರಮ

0
2

ಕಲ್ಲಡ್ಕ : ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ದ. ಕ. ಜಿ. ಪಂ.ಕಿ.ಪ್ರಾ. ಶಾಲೆ ಏಮಾಜೆಗೆ ಎಂ. ಆರ್.ಪಿ.ಎಲ್ ನ ಸಿ ಎಸ್ ಆರ್ ಫಂಡ್ ವತಿಯಿಂದ 2 ನೂತನ ತರಗತಿ ಕೊಠಡಿಗಳಿಗೆ ರೂ 27,50,000 ಅನುದಾನವು ಲಭ್ಯವಾಗಿದ್ದು, ಇದರ ಶಿಲಾನ್ಯಾಸ ಕಾರ್ಯಕ್ರಮ ಮಾರ್ಚ್ 12 ಗುರುವಾರ ಜರಗಿತು.

ನೇರಳಕಟ್ಟೆ ವ್ಯವಸಾಯಿಕ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪುಷ್ಪರಾಜ್ ಚೌಟ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ .ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷೆ ಮಲ್ಲಿಕಾ ಗಣೇಶ್, ಉಪಾಧ್ಯಕ್ಷರಾದ ಹರೀಶ್ ಕುಲಾಲ್, ಕಟ್ಟಡ ರಚನಾ ಗುತ್ತಿಗೆದಾರದ ಅಖಿಲ್ ಶೆಟ್ಟಿ,ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು,ಸದಸ್ಯರು, ಎಸ್. ಡಿ. ಎಂ. ಸಿ ಸದಸ್ಯರು,ಮಕ್ಕಳ ಪೋಷಕರು,ದಾನಿಗಳು,ಊರ ವಿದ್ಯಾಭಿಮಾನಿ ಬಂಧುಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಸ್ವಾಗತಿಸಿದರು. ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here