ದ. ಕ. ಜಿ. ಪಂ. ಕಿ. ಪ್ರಾ ಶಾಲೆ ಏಮಾಜೆಯಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲದ ಪದಗ್ರಹಣ ಕಾರ್ಯಕ್ರಮ

0
10

ಬಂಟ್ವಾಳ : ಶಾಲಾ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮಹತ್ವದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ. ಸರಕಾರಿ ಕಿ. ಪ್ರಾ ಶಾಲೆ ಏಮಾಜೆಯಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲದ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಕುಮಾರಿ ರಿಧಿಕಾ ಶೆಟ್ಟಿ, ಉಪನಾಯಕಿಯಾಗಿ ಕುಮಾರಿ ವರ್ಷ, ಶಿಕ್ಷಣ ಮಂತ್ರಿಯಾಗಿ ಕು. ಪ್ರಕೃತಿ, ಸಹ ಶಿಕ್ಷಣ ಮಂತ್ರಿಯಾಗಿ ಜ್ಞಾನೇಶ್, ಆರೋಗ್ಯಮಂತ್ರಿಯಾಗಿ ಸಂಪ್ರೀತ್, ಸಹ ಆರೋಗ್ಯಮಂತ್ರಿಯಾಗಿ ಸಾನ್ವಿ, ಸಾಂಸ್ಕೃತಿಕ ಮಂತ್ರಿಯಾಗಿ ಅದಿತಿ.ಕೆ.ಪಿ, ಸಹ ಸಾಂಸ್ಕೃತಿಕ ಮಂತ್ರಿಯಾಗಿ ವಂದಿತಾ, ತೋಟಗಾರಿಕಾ ಮಂತ್ರಿಯಾಗಿ ಪ್ರಸನ್ನ, ಸಹ ತೋಟಗಾರಿಕಾ ಮಂತ್ರಿಯಾಗಿ ದನ್ವಿಕ್, ಕ್ರೀಡಾಮಂತ್ರಿಯಾಗಿ ಶ್ಲೋಕ್ ರೈ. ಬಿ, ಸಹ ಕ್ರೀಡಾಮಂತ್ರಿಯಾಗಿ ಶೌರ್ಯ ಕುಲಾಲ್, ಸ್ವಚ್ಛತಾ ಮಂತ್ರಿಯಾಗಿ ವೀಕ್ಷ, ಸಹ ಸ್ವಚ್ಛತಾ ಮಂತ್ರಿಯಾಗಿ ಶಾನಿಬಾ, ಗ್ರಂಥಾಲಯ ಮಂತ್ರಿಯಾಗಿ ಖದೀಜ ಮಾಶಿತ, ಸಹ ಗ್ರಂಥಾಲಯ ಮಂತ್ರಿಯಾಗಿ ಕೃತಿ ಇವರಿಗೆ ಬ್ಯಾಜ್ ತೊಡಿಸುವುದರ ಮೂಲಕ ಅಧಿಕಾರ ನೀಡಲಾಯಿತು.
ಮುಖ್ಯ ಚುನಾವಣಾಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ನೆಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಮಿತ ಡಿ ಪೂಜಾರಿ, ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ಮಲ್ಲಿಕಾ ಗಣೇಶ್ ಆಚಾರ್ಯ, ಪಂಚಾಯತ್ ಸದಸ್ಯರುಗಳಾದ ಶಕೀಲಾ ಕೃಷ್ಣ ಮಿತ್ತ ಕೋಡಿ, ಧನಂಜಯ ಗೌಡ, ಶಾಲಾ ಎಸ್. ಡಿ.ಎಂ. ಸಿ ಉಪಾಧ್ಯಕ್ಷರಾದ ಹರೀಶ್ ಕುಲಾಲ್, ನಿಕಟ ಪೂರ್ವ ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ವಿದ್ಯಾರ್ಥಿಗಳ ಪೋಷಕರು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here