ಪುತ್ತೂರು: ದೃಶ್ಯ ಮೂವೀಸ್ ಅರ್ಪಿಸುವ ಅಜಿತ್ ಬಿಟಿ ನಿರ್ಮಾಣದ ಕೀರ್ತನ್ ಶೆಟ್ಟಿ ಸುಳ್ಯ ಕಥೆ ಹಾಗೂ ಸಂಭಾಷಣೆ ನಿರ್ದೇಶನ ಮಾಡಿರುವ ಕಿರು ಚಲನಚಿತ್ರ ಮಾಹಿ ಪುತ್ತೂರು ಹಾಗೂ ಮಂಗಳೂರಿನಲ್ಲಿ ಭಾರತ್ ಸಿನಿಮಾ ಥಿಯೇಟರ್ನಲ್ಲಿ ಪ್ರೀಮಿಯರ್ ಶೋಗಳ ಮೂಲಕ ಜನಮನವನ್ನು ಗೆಲ್ಲುತ್ತಿದೆ ಈಗಾಗಲೇ ಪುತ್ತೂರಿನಲ್ಲಿ ಮಂಗಳೂರಿನಲ್ಲಿ 10 ಹೌಸ್ ಫುಲ್ ಪ್ರಿಮಿಯರ್ ಶೋಗಳ ಮೂಲಕ ಚಿತ್ರ ಪ್ರೇಮಿಗಳ ಮನಸ್ಸನ್ನು ಗೆಲ್ಲುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಚಿತ್ರವನ್ನು ಈಗಾಗಲೇ ತುಳು ಚಿತ್ರರಂಗದ ಪ್ರಮುಖ ನಿರ್ದೇಶಕರು ಹಾಗೂ ಕಲಾವಿದರು ನೋಡಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರ ಪ್ರಕಾರ ಇದು ಕಿರುಚಿತ್ರವಾಗಿರದೆ ದೊಡ್ಡ ಚಿತ್ರಯಾಗಿದೆ ಎಂಬುದಾಗಿದೆ. ಮಕ್ಕಳ ಭಾವನೆ ಹಾಗೂ ಅನುಕೂಲದ ಜೀವನಶೈಲಿಯ ಕುರಿತಾಗಿ ಅದ್ಭುತವಾಗಿ ಕಥೆಯೊಂದಿಗೆ ಸಾಗುವ ಈ ಚಿತ್ರದಲ್ಲಿ ಸಹ ಬರಹಗಾರರಾಗಿ ಜೈದೀಪ್ ರೈ ಕೋರಂಗ , ಸುಪ್ರೀತ ಕೆಎಸ್, ಹಿತಾಶ್ರೀ ಶೆಟ್ಟಿ ಕಾರ್ಯನಿರ್ವಹಿಸಿದ್ದು ಛಾಯಾಗ್ರಾಹಕರಾಗಿ ಪ್ರಶಾಂತ್ ಶೇಣಿ , ಸಂಗೀತ ಸಂಯೋಜನೆಯಲ್ಲಿ ರೋಹಿತ್ ಪೂಜಾರಿ , ಸಂಕಲನಕಾರರಾಗಿ ಶ್ರೀನಾಥ್ ಪವಾರ್, ಡ್ರೋನ್ ಚಾಲಕರಾಗಿ ಅಭ್ಯುದಯ್, ಸಹಾಯಕ ನಿರ್ದೇಶಕರಾಗಿ ಯಶ್ವಿತ್ ಕಾವು ಕಾರ್ಯನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಪ್ರಮುಖವಾಗಿ ಮುಖ್ಯ ಭೂಮಿಕೆಯಲ್ಲಿ ತುಳು ಚಿತ್ರರಂಗದ ಹಿರಿಯ ನಟ ದಯಾನಂದ ರೈ ಬೆಟ್ಟಂಪಾಡಿ, ಸುಪ್ರೀತ ಕೆಎಸ್ ಸುಳ್ಯ, ಜೈದೀಪ್ ರೈ, ಇಶಾನ್, ಅವ್ಯಕ್ತ, ದುರ್ಗಾ ಪ್ರಸಾದ್, ಪ್ರಮಿತ್ ರಾಜ್ , ಸೌಪರ್ನಿಕ ರೈ , ದೀಕ್ಷಣ್ ಶೆಟ್ಟಿ , ಸನ್ನಿಧಿ, ನಿಶಾಂತ್, ಮನ್ವಿತ್ , ಧನ್ವಿಕ, ಯಶ್ವಿಕ, ಭವಿಕ , ಲಹಿತ್, ಶ್ರೇಯಸ್, ಅನ್ವಿತ್, ಯಜ್ಞ, ಆದ್ಯ, ಹರ್ಷಿತ್ ಇನ್ನು ಅನೇಕ ಕಲಾವಿದರು ಅಭಿನಯಿಸಿದ್ದಾರೆ
ಚಿತ್ರವು ಶೀಘ್ರದಲ್ಲಿ ಸುಳ್ಯದಲ್ಲಿ ಕೂಡ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಮಾಹಿತಿಯನ್ನು ಹಂಚಿಕೊಂಡಿದೆ..

