ಬಿಡುಗಡೆ ಆದ 10ದಿವಸದಲ್ಲಿ 1ಲಕ್ಷ ಕ್ಕಿಂತಲೂ ಹೆಚ್ಚು ಜನರಿಂದ ವೀಕ್ಷಣೆ ಹಾಗೂ ಉತ್ತಮ ಅಭಿಪ್ರಾಯ.
3brothers panaje ಅರ್ಪಿಸಿದ ಕನ್ನಡ ಕಿರು ಚಿತ್ರ ಮಾರ್ಚ್ 1 ರಂದು ಬಿಡುಗಡೆ ಆಗಿ ಕೇವಲ ಕೆಲವೇ ದಿನಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ಇದು ಒಂದು ಶಾಲಾ ಜೀವನದಲ್ಲಿ ನಡೆಯುವ ಅತೀ ಉತ್ತಮ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ. ಪ್ರಮುಖ ಪಾತ್ರಕ್ಕೆ ಜೀವ ತುಂಬಿದವರು ಕನ್ನಡ ತುಳು ಚಿತ್ರ ನಟರಾದ ದೀಪಕ್ ರೈ ಪಾಣಾಜೆ , ಗಣಿತ ಮಾಸ್ಟರ್ ಪಾತ್ರದಲ್ಲಿ ಮಿಂಚಿದ್ದು , ಇನ್ನೊಂದ್ ಪ್ರಮುಖ ಪಾತ್ರದಲ್ಲಿ ಕನ್ನಡದ ಖ್ಯಾತ ನಟರಾದ ರಮೇಶ್ ರೈ ಕುಕ್ಕುವಳ್ಳಿ ಹಾಗೂ ಟೀಚರ್ ಪಾತ್ರದಲ್ಲಿ ಅಕ್ಷತಾ ರೈ ಹಾಗೂ ಹರ್ಷಿತ ರೈ ನಟಿಸಿದ್ದಾರೆ.
ಈ ಚಿತ್ರದ ಕಥೆ ಚಿತ್ರಕತೆ ನಿರ್ದೇಶನ ಹಾಗೂ ಮ್ಯೂಸಿಕ್ ಕೊಟ್ಟವರು ಚೇತನ್ ರೈ ಪಾಣಾಜೆ ಚಿತ್ರದ ಛಾಯಾಗ್ರಾಹಕರು ರಂಜನ್ ಇಂಧಾಜೆ ಹಾಗೂ ಅನೇಕ ಕಲಾವಿದರು ನಟಿಸಿದ್ದಾರೆ. ಪ್ರತಿಯೊಬ್ಬರೂ ನೋಡಬಹುದಾದ ಅದ್ಭುತ ಚಿತ್ರ ಪ್ರತಿಯೊಬ್ಬರನ್ನು ತಮ್ಮ ಶಾಲಾ ಜೀವನಕ್ಕೆ ಕೊಂಡೋಯುವ ಕನ್ನಡ ಚಿತ್ರ ಇದಾಗಿದೆ.
ಈ ಕಿರುಚಿತ್ರವನ್ನು 3brothers ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.

