ವರದಿ ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ
ತುಳುನಾಡು ÷ ತುಳುನಾಡಿನ ಆರಾಧ್ಯ ದೇವರಾದ ಕುಂದಾಪುರ ಸಮೀಪದ ಬಸ್ರೂರಿನ ಪುರಾತನ ತುಳುವೇಶ್ವರ ದೇವಸ್ಥಾನಕ್ಕೆ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಜೈನ ಮಠ ಮೂಡುಬಿದಿರೆ ಇವರು ಭೇಟಿ ನೀಡಿ ಹೂವು ಹಣ್ಣು ಕಾಯಿ ದೇವರಿಗೆ ನೀಡಿ ದರ್ಶನ ಪಡೆದರು.

ತುಳುವಶ್ವರ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಬಸ್ರೂರಿನ ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಯುತ್ತಿದ್ದು, ಅಲ್ಲಿಗೆ ಭೇಟಿ ನೀಡಿದ ಮಹಾಸ್ವಾಮಿಗಳು, ತುಳುವೇಶ್ವರನ ಭಕ್ತರು ಎಲ್ಲರೂ ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು, ದೇವಾಲಯಗಳ ಊರು ಬಸ್ರೂರಿನಲ್ಲಿ ತುಳುವೇಶ್ವರನ ದೇವಾಲಯ ಮತ್ತೊಮ್ಮೆ ಜೀರ್ಣೋದ್ಧಾರವಾಗಿ ಭಕ್ತರಿಗೆ ದರ್ಶನ ನೀಡುವಂತಾಗಲಿ, ನಾಡಿನ ಸರ್ವರೂ ಸ್ವ ಇಚ್ಛೆಯಿಂದ ಈ ದೇವಸ್ಥಾನ ನಿರ್ಮಾಣದಲ್ಲಿ ಸಹಕರಿಸುವಂತೆ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಸಾವಿರಾರು ವರ್ಷಗಳ ಇತಿಹಾಸವುಳ್ಳ ತುಳುವೇಶ್ವರನ ದೇವಸ್ಥಾನ ಮರು ನಿರ್ಮಾಣ ಕಾರ್ಯಕ್ರಮ ಆರಂಭಿಸಿದ ಎಲ್ಲರನ್ನೂ ಅಭಿನಂದನೆ ಜೊತೆಗೆ ಆಶೀರ್ವದಿಸಿದ ಮಹಾಸ್ವಾಮಿಗಳು ತನ್ನ ವೈಯಕ್ತಿಕ ದೇಣಿಗೆ ನೀಡಿ ಮುಂದೆಯೂ ಸಹಕಾರ ನೀಡುವುದಾಗಿ ತಿಳಿಸಿದರು,
ಸಾವಿರಾರು ವರ್ಷಗಳ ಇತಿಹಾಸವುಳ್ಳ ಮರವೇ ಆಲಯವಾಗಿ ಗರ್ಭಗುಡಿಯಾಗಿ ಅದರೊಳಗೆ ಭದ್ರವಾಗಿ ನೆಲೆ ನಿಂತ ತುಳುವೇಶ್ವರನಿಗೆ ಪರಮಪೂಜ್ಯ ಸ್ವಾಮೀಜಿಯವರು ಭಕ್ತಿಯಿಂದ ಹೂವನ್ನ ಸಮರ್ಪಿಸಿದರು.