ಕಾರ್ಕಳ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ದಿನಾಂಕ 07-04-2026ರಂದು ಮಂಗಳವಾರ ಕಾರ್ಕಳ ನಗರ ಪೊಲೀಸ್ ಠಾಣೆ ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ರಾತ್ರಿ ಘಂಟೆ 8.30 ರಿಂದ ಹರಕೆಯ ಗಗ್ಗರ ಸೇವೆ ಹಾಗೂ ಅನ್ನ ಸಂತರ್ಪಣೆ ವಿಜೃಂಭಣೆಯಿಂದ ನಡೆಯಿತು.
ಉಡುಪಿ ಜಿಲ್ಲಾ ಪೊಲೀಸ್ ಎಸ್ಪಿ ಹರಿರಾಮ್ ಶಂಕರ್, ಡಿ ವೈ ಎಸ್ಪಿ ವಿಜಯ್ ಪ್ರಸಾದ್, ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಡಿ. ಆರ್, ಟೌನ್ ಪಿ. ಎಸ್. ಐ. ಮುರಳೀಧರ ನಾಯ್ಕ್, ಶಿವಕುಮಾರ್, ರೂರಲ್ ಪಿ. ಎಸ್ ಐ. ಪ್ರಸನ್ನ, ಸುಂದರ, ಹಾಗೂ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ದವರು ದೈವದ ಹರಕೆಯ ನೇಮೋತ್ಸವ ದ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಭೇಟಿ ನೀಡಿ ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.ಭಕ್ತಾಭಿಮಾನಿಗಳು ದೈವದ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.
ವರದಿ ಅರುಣ್ ಭಟ್ ಕಾರ್ಕಳ.

