ಮುಂಡಳ್ಳಿ ಅಮ್ಮನವರ ಅಷ್ಠಬಂಧದಲ್ಲಿ ಸಾಂಗವಾಗಿ ನೆರವೇರಿದ ಪಲ್ಲಕಿ ಉತ್ಸವ

0
14

ಭಟ್ಕಳ : ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಷ್ಠ ಬಂಧ ಬ್ರಹ್ಮ ಕಲಶೋತ್ಸವ ನಾಲ್ಕನೆ ದಿನ ತಾಯಿಯ ಪಲ್ಲಕಿ ಉತ್ಸವ ನೆರವೇರಿತು.

ಸಂಜೆ ೫ ಗಂಟೆಗೆ ಆರಂಭವಾದ ತಾಯಿಯ ಉತ್ಸವ ಮೂರ್ತಿಯ ಮೆರವಣಿಗೆ ಮುಂಡಳ್ಳಿಯ ಪಾವಣಿಹಿತ್ಲು, ಸತ್ಯನಾರಾಯಣ ನಗರ,ನೀರಗದ್ದೆ,ಜೋಗಿಮನೆ,ಮೊಗೇರಕೇರಿ ಹಾವಳಿಕಂಠ ಭಾಗಗಳಲ್ಲಿ ವಿಜೃಂಭಣೆಯಿಂದ ನಡೆದು ರಾತ್ರಿ ೧೨ ಗಂಟೆಗೆ ಸಂಪನ್ನಗೊಂಡಿತು.

ಪಲ್ಲಕಿ ಉತ್ಸವದಲ್ಲಿ ಚಂಡೆ ವಾದ್ಯ, ಭಜನಾ ತಂಡಗಳ ಕುಣಿತ ಗಮನಸೆಳೆದವು.ಊರು ಮತ್ತು ಪರೂರಿನ ಭಕ್ತರು ಭಾಗವಹಿಸಿದ್ದು ವಿಶೇಷ ವಾಗಿತ್ತು.

LEAVE A REPLY

Please enter your comment!
Please enter your name here