ಮೂಡುಬಿದಿರೆ ರಾಜ್ಯ ಹೆದ್ದಾರಿಗಳ ದಯನೀಯ ಪರಿಸ್ಥಿತಿ

0
14

ಮೂಡುಬಿದಿರೆ :ತಿರುವುಗಳಲ್ಲಿ, 3-4 ರಸ್ತೆ ಸೇರುವಲ್ಲಿ ಹತ್ತಾರು ಹೊಂಡಗಳಲ್ಲಿ ಎದ್ದು ಬಿದ್ದು ನಲುಗುತ್ತಿರುವ ವಾಹನಗಳು, ಕೆಸರಿನ ಅಭಿಷೇಕದಲ್ಲಿ ನಡೆದಾಡುವವರು

ಮೂಡುಬಿದಿರೆಯನ್ನು ಸಂಪರ್ಕಿಸುವ ಎಲ್ಲ ರಾಜ್ಯ ಹೆದ್ದಾರಿಗಳ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ. ಕೆಲವಾರು ಕಡೆಗಳಲ್ಲಿ ಅರ್ಧ, ಒಂದು ಫೀಟ್ ಗಳಷ್ಟು ದೊಡ್ಡ ಹೊಂಡಗಳು, ತಿರುವುಗಳಲ್ಲಿ, 3-4 ರಸ್ತೆ ಸೇರುವ ಸ್ಥಳಗಳಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ವಿಚಾರಿಸಲು ಲೋಕೋಪಯೋಗಿ ಅಧಿಕಾರಿಗಳಾಗಲಿ, ಇಂಜಿನಿಯರ್ ಗಳಾಗಲಿ ಮೂಡುಬಿದಿರೆಯಲ್ಲಿ ಲಭ್ಯರಿಲ್ಲ. ಶಾಸಕರಿಗೆ ಅದರ ಅಗತ್ಯವೇ ಇಲ್ಲದಂತೆ ದೂರದ ಮಂಗಳೂರಿನಲ್ಲಿ ಇದ್ದಾರೆ. ಒಟ್ಟಾರೆ ಕೇಳುವವರಿಲ್ಲದ ಪರಿಸ್ಥಿತಿ.


ಸಾವಿರ ಕಂಬದ ಬಸದಿ, ಜೈನ ಮಠದ ಬಳಿಯ ತಿರುವು, ರೋಟರಿ ಶಾಲೆ-ಪೊಲೀಸು ನಿಲ್ದಾಣದ ಬಳಿ, ಹಳೆ ಪೊಲೀಸು ಠಾಣೆಯ ಬಳಿ, ವಿದ್ಯಾಗಿರಿ-ಅಗರಿ-ಮುಲ್ಕಿ ರಸ್ತೆ, ಪುತ್ತಿಗೆ-ಕೊಡ್ಯಡ್ಕ ಇತ್ಯಾದಿ ಹೆಚ್ಚಿನ ಪ್ರದೇಶಗಳು ವಾಹನಗಳು ಚಲಿಸಲಾಗದ ಸ್ಥಿತಿಗೆ ಬಂದು ಹಲವಾರು ತಿಂಗಳುಗಳೇ ಕಳೆದರೂ ಶಾಸಕರಿಗೆ ಈ ಬಗ್ಗೆ ತಿಳಿಯಲೂ ಸಮಯವಿಲ್ಲ. ಐಷಾರಾಮಿ ಕಾರಿನಲ್ಲಿ ಗೊತ್ತೂ ಆಗದ ಪರಿಸ್ಥಿತಿ. ಒಟ್ಟಾರೆ ಗೆಲ್ಲಿಸಿದ ನಾಗರಿಕರು ತಾವೇ ಹೊಡೆದುಕೊಳ್ಳಬೇಕು.


ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here